ಜಿಲ್ಲೆ

ಬೀದರ್ ನಗರಸಭೆ ಮೀಸಲು ಕರಡು ಪ್ರಕಟ

ಬೀದರ್: ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೀದರ್ ನಗರಸಭೆ ಚುನಾವಣೆಗೆ ಶೀಘ್ರವೇ ದಿನಾಂಕ ನಿಗದಿಯಾಗುವುದು ಸ್ಪಷ್ಟವಾಗಿದೆ. ನಗರಸಭೆಯ 35 ವಾಡ್೯ಗಳಿಗೆ ಮೀಸಲಾತಿ ಕರಡು ಪಟ್ಟಿಯನ್ನು ಬುಧವಾರ ಸರ್ಕಾರ ಪ್ರಕಟಿಸಿದೆ.

ನಗರದ ಕೆಲವು ವಾಡ್೯ಗಳ ಮೀಸಲಾತಿ ತಕರಾರು ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ನಗರಸಭೆ ಚುನಾವಣೆ ನನೆಗುದಿಗೆ ಬಿದ್ದಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮೀಸಲಾತಿ ಕರಡು ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ವಿಷಯಕ್ಕೆ ಸಂಬಂದಿಸಿದಂತೆ ಯಾವುದೇ ಆಕ್ಷೇಪಣೆ ಸಲ್ಲಿಸುವವರು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಕರಡು ಮೀಸಲಾತಿ ನಂತರ ಚುನಾವಣೆ ಪ್ರಕ್ರಿಯೆ ಶುರುವಾಗುತ್ತವೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬರುವ ಮಾರ್ಚ್ ನಲ್ಲಿ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಚುನಾವಣೆ ಸಂಬಂಧ ಈಗಾಗಾಲೇ ವಿವಿಧ ಪಕ್ಷಗಳು ತಯಾರಿ ನಡೆಸಿವೆ. ವಾಡ್೯ವಾರು ಆಕಾಂಕ್ಷಿಗಳು ಸಹ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸಿದ್ದಾರೆ. ವಾಡ್೯ವಾರು ಕರಡು ಮೀಸಲಾತಿ ವಿವರ ಹೀಗಿದೆ.

ವಾಡ್೯ 1 : ಸಾಮಾನ್ಯ
ವಾಡ್೯ 2 : ಹಿಂದುಳಿದ ವರ್ಗ (ಎ) ಮಹಿಳೆ
ವಾಡ್೯ 3 : ಹಿಂದುಳಿದ ವರ್ಗ (ಬಿ) ಮಹಿಳೆ
ವಾಡ್೯ 4 : ಸಾಮಾನ್ಯ
ವಾಡ್೯ 5 : ಹಿಂದುಳಿದ ವರ್ಗ (ಎ)
ವಾಡ್೯ 6 : ಸಾಮಾನ್ಯ ಮಹಿಳೆ
ವಾಡ್೯ 7 : ಹಿಂದುಳಿದ ವರ್ಗ (ಬಿ)
ವಾಡ್೯ 8 : ಹಿಂದುಳಿದ ವರ್ಗ (ಎ) ಮಹಿಳೆ
ವಾಡ್೯ 9 : ಸಾಮಾನ್ಯ ಮಹಿಳೆ
ವಾಡ್೯ 10 : ಪರಿಶಿಷ್ಟ ಜಾತಿ
ವಾಡ್೯ 11 : ಪರಿಶಿಷ್ಟ ಜಾತಿ ಮಹಿಳೆ
ವಾಡ್೯ 12 : ಸಾಮಾನ್ಯ
ವಾಡ್೯ 13 : ಪರಿಶಿಷ್ಟ ಜಾತಿ
ವಾಡ್೯ 14 : ಹಿಂದುಳಿದ ವರ್ಗ (ಎ)
ವಾಡ್೯ 15 : ಸಾಮಾನ್ಯ ಮಹಿಳೆ
ವಾಡ್೯ 16 : ಸಾಮಾನ್ಯ
ವಾಡ್೯ 17 : ಹಿಂದುಳಿದ ವರ್ಗ (ಎ) ಮಹಿಳೆ
ವಾಡ್೯ 18 : ಪರಿಶಿಷ್ಟ ಜಾತಿ ಮಹಿಳೆ
ವಾಡ್೯ 19 : ಸಾಮಾನ್ಯ
ವಾಡ್೯ 20 : ಹಿಂದುಳಿದ ವರ್ಗ (ಎ)
ವಾಡ್೯ 21 : ಸಾಮಾನ್ಯ ಮಹಿಳೆ
ವಾಡ್೯ 22 : ಹಿಂದುಳಿದ ವರ್ಗ (ಎ) ಮಹಿಳೆ
ವಾಡ್೯ 23 : ಪರಿಶಿಷ್ಟ ಪಂಗಡ ಮಹಿಳೆ
ವಾಡ್೯ 24 : ಸಾಮಾನ್ಯ
ವಾಡ್೯ 25 : ಸಾಮಾನ್ಯ
ವಾಡ್೯ 26 : ಹಿಂದುಳಿದ ವರ್ಗ (ಎ)
ವಾಡ್೯ 27 : ಸಾಮನ್ಯ ಮಹಿಳೆ
ವಾಡ್೯ 28 : ಸಾಮಾನ್ಯ
ವಾಡ್೯ 29 : ಸಾಮಾನ್ಯ ಮಹಿಳೆ
ವಾಡ್೯ 30 : ಸಾಮಾನ್ಯ ಮಹಿಳೆ
ವಾಡ್೯ 31 : ಪರಿಶಿಷ್ಟ ಪಂಗಡ
ವಾಡ್೯ 32 : ಪರಿಶಿಷ್ಟ ಜಾತಿ
ವಾಡ್೯ 33 : ಸಾಮಾನ್ಯ ಮಹಿಳೆ
ವಾಡ್೯ 34 : ಸಾಮಾನ್ಯ ಮಹಿಳೆ
ವಾಡ್೯ 35 : ಸಾಮಾನ್ಯ