ಬೀದರ್: ವಿವಿಧ ಸಮಾಜಗಳ ಮಠ-ಮಂದಿರ, ಸಂಘ-ಸಂಸ್ಥೆ, ಟ್ರಸ್ಟ್ ಹಾಗೂ ಸಮುದಾಯ ಭವನ, ವಿದ್ಯಾಥರ್ಿ ನಿಲಯ ಕಟ್ಟಡಗಳ ನಿಮರ್ಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೀದರ್ ಲೋಕಸಭಾ ಕ್ಷೇತ್ರಕ್ಕೆ 14.65 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಆಳಂದ ತಾಲೂಕಿನ ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಗೆ 50 ಲಕ್ಷ ರೂ., ನರೋಣಾದ ಶ್ರೀ ಚನ್ನಮಲ್ಲದೇವರು ಹೊಸಮಠಕ್ಕೆ 50 ಲಕ್ಷ, ಕಿಣ್ಣಿಸುಲ್ತಾನದ ಶ್ರೀ ಶಾಂತಲಿಂಗೇಶ್ವರ ಹಿರೇಮಠಕ್ಕೆ 30 ಲಕ್ಷ, ಬಂಗರಗಾದ ಶ್ರೀ ಚರಂತೇಶ್ವರ ಹಿರೇಮಠಕ್ಕೆ 50 ಲಕ್ಷ, ಚಿಂಚೋಳಿ ತಾಲೂಕಿನ ಚಂದನಕೇರಾದ ಶ್ರೀ ಭೃಂಗಿ ಪಾಚೇಶ್ವರ ಸಂಸ್ಥಾನಕ್ಕೆ 25 ಲಕ್ಷ, ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠಕ್ಕೆ 25 ಲಕ್ಷ, ಕಾಳಗಿ ತಾಲೂಕಿನ ಸೂಗುರು ಗ್ರಾಮದ ಶ್ರೀ ರುದ್ರಮುನೀಶ್ವರ ಹಿರೇಮಠಕ್ಕೆ 25 ಲಕ್ಷ, ಕಲ್ಲಹಿಪ್ಪಗರ್ಿಯ ಶ್ರೀ ಗುರು ಗಂಗಾಧರೇಶ್ವರ ಹಿರೇಮಠ ಸಂಸ್ಥಾನಕ್ಕೆ 50 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಗಡಿಗೌಡಗಾಂವದ ಶ್ರೀ ಹಾವಗಿಲಿಂಗೇಶ್ವರ ಮಠಕ್ಕೆ 50 ಲಕ್ಷ, ಹಿರನಾಗಾಂವನ ಶ್ರೀ ಶಾಂತಲಿಂಗೇಶ್ವರ ಮಠಕ್ಕೆ 50 ಲಕ್ಷ, ಪ್ರತಾಪುರದ ಶ್ರೀ ಚನ್ನಮಲ್ಲಸ್ವಾಮಿ ವಿರಕ್ತಮಠಕ್ಕೆ 50 ಲಕ್ಷ, ರಾಜೇಶ್ವರದ ಘನಲಿಂಗ ರುದ್ರಮುನಿ ಶಿವಾಚಾರ್ಯರ ಸಂಸ್ಥಾನ ಹಿರೇಮಠಕ್ಕೆ 50 ಲಕ್ಷ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಕೆ) ಶ್ರೀ ಗುರುವರ್ಯರ ತತ್ವ ದರ್ಶನ ಪೀಠಕ್ಕೆ 25 ಲಕ್ಷ, ಹಳ್ಳಿಖೇಡ್(ಬಿ) ಶ್ರೀ ಗುರು ಸಿದ್ದೇಶ್ವರ ಸಂಸ್ಥಾನ ಚಿಕ್ಕಮಠಕ್ಕೆ 50 ಲಕ್ಷ, ಹುಡುಗಿಯ ಶ್ರೀ ಚನ್ನಮಲ್ಲೇಶ್ವರ ವಿರಕ್ತಮಠ ಟ್ರಸ್ಟ್ಗೆ 50 ಲಕ್ಷ, ಬೀದರ್ ತಾಲೂಕಿನ ಕಮಠಾಣದ ಗವಿಮಠಕ್ಕೆ 50 ಲಕ್ಷ ರೂ. ಅನುದಾನ ಕಲ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುಂಠಾಣದ ಶ್ರೀ ಚನ್ನರುದ್ರಮುನೀಶ್ವರ ದೇವಸ್ಥಾನಕ್ಕೆ 50 ಲಕ್ಷ, ಗುಂಡಗತರ್ಿಯ ಶ್ರೀ ರುದ್ರಮುನೀಶ್ವರ ಗ್ರಾಮೀಣಾಭಿವೃದ್ಧಿ ಟ್ರಸ್ಟ್ಗೆ 50 ಲಕ್ಷ, ಅಟ್ಟಗರ್ಾದ ಶ್ರೀ ಮಹಾದೇವ ದೇವಸ್ಥಾನಕ್ಕೆ 20 ಲಕ್ಷ, ವಿಠ್ಠಲ ಮಂದಿರಕ್ಕೆ 20 ಲಕ್ಷ, ಭಾಲ್ಕಿ ದೇಶಪಾಂಡೆ ಗಲ್ಲಿಯ ಬಲಭೀಮ ಮಂದಿರಕ್ಕೆ 10 ಲಕ್ಷ, ಯಾಕತಪುರ ಹನುಮಾನ ದೇವಸ್ಥಾನಕ್ಕೆ 10 ಲಕ್ಷ, ಡೋಣಗಾಂವ(ಎಂ)ನ ಶ್ರೀ ಗುರು ಹಾವಗಿಸ್ವಾಮಿ ಮಠಕ್ಕೆ 50 ಲಕ್ಷ, ಪ್ರತಾಪುರ ವೀರಭದ್ರೇಶ್ವರ ದೇವಸ್ಥಾನಕ್ಕೆ 50 ಲಕ್ಷ, ಹುಲಸೂರಿನ ವೀರಭದ್ರೇಶ್ವರ ಮಂದಿರಕ್ಕೆ 25 ಲಕ್ಷ, ಮೇಹಕರನ ಮಹಾದೇವ ಮಂದಿರಕ್ಕೆ 25 ಲಕ್ಷ ಹಾಗೂ ಚಾಳಕಾಪುರದ ಹನುಮಾನ ಮಂದಿರಕ್ಕೆ 50 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಭಾಲ್ಕಿ ಅಂಬೇಡ್ಕರ್ ಸಮುದಾಯ ಭವನ ನಿಮರ್ಾಣಕ್ಕೆ 1 ಕೋಟಿ ರೂ., ಕಾಳಗಿಯ ಶ್ರೀಗುರು ರುದ್ರಮುನೀಶ್ವರ ಜನಕಲ್ಯಾಣ ಪ್ರತಿಷ್ಠಾನಕ್ಕೆ 25 ಲಕ್ಷ, ಬಸವತಿರ್ಥನ ಎಸ್ಜಿಎಸ್ಬಿವಿ ಟ್ರಸ್ಟ್ಗೆ 50 ಲಕ್ಷ, ಜೊನ್ನಿಕೇರಿಯ ಶ್ರೀಗುರು ಪತ್ರಿಸ್ವಾಮಿ ಚಾರಿಟೇಬಲ್ ಟ್ರಸ್ಟ್ಗೆ 50 ಲಕ್ಷ, ಕಿಟ್ಟಾದ ಶ್ರೀ ಗುರುಸಿದ್ದೇಶ್ವರ ಜನಕಲ್ಯಾಣ ಪ್ರತಿಷ್ಠಾನಕ್ಕೆ 50 ಲಕ್ಷ, ಪಡಸಾವಳಿಯ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಗೆ 50 ಲಕ್ಷ, ರಟಕಲ್ನ ಶ್ರೀ ರೇವಣಸಿದ್ದೇಶ್ವರ ಸಂಸ್ಥೆಗೆ 50 ಲಕ್ಷ, ರಾಜೇಶ್ವರದ ರಂಭಾಪುರಿ ಶಿಕ್ಷಣ ಪ್ರತಿಷ್ಠಾನಕ್ಕೆ 50 ಲಕ್ಷ ರೂ. ಅನುದಾನ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕ್ಷೇತ್ರದ ಧಾಮರ್ಿಕ, ಶೈಕ್ಷಣಿಕ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಿಗಾಗಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 14.65 ಕೋಟಿ ರೂ. ಕೊಟ್ಟಿದ್ದಾರೆ.
| ಭಗವಂತ ಖೂಬಾ, ಕೇಂದ್ರ ಸಚಿವ