ಚಿಕ್ಕಮಗಳೂರು: ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಬಿಡಾಡಿ ಜಾನುವಾರುಗಳನ್ನು ಗೋಶಾಲೆಗೆ ದಾಖಲಿಸಿಕೊಳ್ಳದ ಸಂಸ್ಥೆಗಳಿಗೆ ಸರ್ಕಾರದ ಸವಲತ್ತು ಹಾಗೂ ಅನುದಾನ ತಡೆಹಿಡಿಯಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವರದಿ ಪ್ರಕಾರ ೮೦೦ಕ್ಕೂ ಹೆಚ್ಚು ರಾಸುಗಳು ಸಾವಪ್ಪಿರುವುದು ವರದಿಯಾಗಿದೆ. ಕೆಲವು ಹೊಟ್ಟೆ ಹುಬ್ಬಿನಿಂದ, ರಸ್ತೆ ಬದಿ ಪ್ಲಾಸ್ಟಿಕ್ ಹಾಗೂ ಸಣ್ಣಪುಟ್ಟ ಸಮಾರಂಭದ ತ್ಯಾಜ್ಯಗಳ ಸೇವನೆಯಿಂದ ರಾಸುಗಳು ಸಾವಪ್ಪಿರುವ ಪ್ರಕರಣ ವರದಿಯಾದ ಕಾರಣ ಸರ್ಕಾರಿ ಅಥವಾ ಖಾಸಗಿ ಗೋಶಾಲೆಗಳಲ್ಲಿ ಬೀಡಾಡಿ ದನಗಳನ್ನು ದಾಖಲಿಸುವಂತೆ ಸೂಚನೆ ನೀಡಿದರು.
ರಸ್ತೆಗಳಲ್ಲಿ ಹಸುಗಳ ಓಡಾಟದಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ಅಲ್ಲದೇ ಅನೇಕ ಅಪಘಾತಗಳು ಸಂಭವಿಸುತ್ತಿರುವ ಕಾರಣ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಗೋಶಾಲೆಗೆ ಅವುಗಳನ್ನು ಬಿಡಬೇಕು. ಹಸುಗಳನ್ನು ದಾಖಲಿಸಿಕೊಳ್ಳದೇ ನಿರಾಕರಿಸುವ ಸಂಸ್ಥೆಗಳಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಕಡಿತಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಡೂರು ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಡೈರಿಗಳ ಸಮಸ್ಯೆಯಿಂದ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಜಮೀನಿನಲ್ಲಿ ಬಹುತೇಕ ತೆಂಗು ಇನ್ನಿತರೆ ಬೆಳೆಗಳು ಹೊಂದಿದ್ದರೂ ಜೀವನದ ಆಧಾರವಾಗಿ ಹೈನುಗಾರಿಕೆ ವೃತ್ತಿಯನ್ನೇ ಅವಲಂಭಿಸಿರುವ ರೈತರಿಗೆ ಸಮರ್ಪಕವಾಗಿ ಸ್ಪಂದಿಸಲು ಪ್ರತ್ಯೇಕ ಘಟಕ ಸ್ಥಾಪಿಸಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಕಡೂರು, ಚಿಕ್ಕಮಗಳೂರು ಹಾಗೂ ಅರಸೀಕೆರೆ ಒಳಗೊಂಡ ಜಿಲ್ಲೆಗೊಂದು ಪ್ರತ್ಯೇಕ ಡೈರಿ ಘಟಕ ಸ್ಥಾಪಿಸಿದರೆ ಹಾಸನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕನಿಷ್ಟ ಪ್ರತಿ ತಾಲ್ಲೂಕಿನಲ್ಲಿ ಇಂತಿಷ್ಟು ಹಾಲು ಸಂಗ್ರಹಿಸಬೇಕಾಗುತ್ತದೆ. ಈ ಸಂಬAಧ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಘಟಕ ಸ್ಥಾಪಿಸಲು ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮAತ್, ವಿಸ್ತರಣಾ ಮತ್ತು ತರಬೇತಿ ಜಂಟಿ ನಿರ್ದೇಶಕ ಪ್ರಸನ್ನಕುಮಾರ್, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಮೋಹನ್‌ಕುಮಾರ್, ಆಯುಕ್ತೆ ರೂಪಶ್ರೀ, ನಿರ್ದೇಶಕ ಮಂಜುನಾಥ್ ಪಾಳೇಗಾರ್ ಮತ್ತಿತರರಿದ್ದರು.