ಕೊಪ್ಪ: ಹೇರೂರು ಗ್ರಾಮ ಪಂಚಾಯಿತಿ ಸೀಗೋಡು ಸಮೀಪದ ಹುಲ್ಲುಕೋಡುಗದ್ದೆಯಲ್ಲಿ ಅಕ್ರಮವಾಗಿ ಬೀಟೆ ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದಾಗ ಕೊಪ್ಪ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮರದ ತುಂಡುಗಳು ಹಾಗೂ ಎರಡು ಬೈಕುಗಳನ್ನು ವಶಪಡಿಸಿ ಕೊಂಡಿದ್ದಾರೆ.
ದಾಳಿ ನಡೆಸಿದಾಗ ಆರೋಪಿಗಳಾದ ಹುಲ್ಲುಕೋಡುಗದ್ದೆ ಪ್ರತಾಪ್, ಹೇರೂರಿನ ಸಚಿನ್, ಶಿವಕುಮಾರ ತಪ್ಪಿಸಿಕೊಂಡರು. ಕೊಪ್ಪ ಆರ್‌ಎಫ್‌ಒ ರಂಗನಾಥ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗೌಸ್ ಮಹಮದ್, ಶಿವರುದ್ರಪ್ಪ, ರೇವಣ್ಣ ಕಾರ್ಯಾಚರಣೆ ನಡೆಸಿದರು.