High Angle View Of Judge Gavel And 
ಜಿಲ್ಲೆ

ಬೀಟೆ ಮರ ಅಕ್ರಮ ಸಾಗಣೆ

Kodagu

ಕೊಡಗು : ಬೀಟೆ ಮರದ ನಾಟನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳ ತಂಡ ದಾಳಿ ಮಾಡಿ ಇಬ್ಬರು ಆರೋಪಿಗಳು ಹಾಗೂ 26 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದೆ.


ಕುಂಜಿಲ ಗ್ರಾಮದ ಜುಬೇದ್, ವಿ.ಬಾಡಗ ಗ್ರಾಮದ ವೈ.ಸಿ.ಮಹೇಶ ಬಂಧಿತರು. 35 ಮರದ ನಾಟಗಳು, ಲಾರಿ, ಪಿಕ್‌ಅಪ್ ವಾಹನ, ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು 26 ಲಕ್ಷ ರೂ. ಮೌಲ್ಯದ ಮಾಲನ್ನು ವಶ ಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ಶನಿವಾರ ರಾತ್ರಿ ನೆಮ್ಮಲೆ ಗ್ರಾಮದ ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯ ಸಮೀಪ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಲಾಗಿದೆ.


ವಿರಾಜಪೇಟೆ ಉಪ ಅರಣ್ಯ ಅಧಿಕಾರಿ ಶಿವರಾಂ ಬಾಬು ಮಾರ್ಗದರ್ಶನದಲ್ಲಿ ತಿತಿಮತಿ ಎಸಿಎಫ್ ಕೆ.ಎ.ನೆಹರು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪೊನ್ನಂಪೇಟೆ ಆರ್‌ಎಫ್‌ಒ ಬಿ.ಎಂ.ಶಂಕರ್, ಡಿಆರ್‌ಎಫ್‌ಒ ಸಿ.ಡಿ.ಬೋಪಣ್ಣ, ಕೆ.ಜಿ.ದಿವಾಕರ್, ರಕ್ಷಿತ್, ಮಂಜುನಾಥ ಬೆನಕೊಟಗಿ, ಸಿಬ್ಬಂದಿ ಸಂಜಯ್ ಚಹ್ವಾನ್, ಕೆ.ಜಿ.ರಾಕೇಶ್, ಆಂಟೋನಿ ಪ್ರಕಾಶ್, ಆರ್‌ಆರ್‌ಟಿ ತಂಡ ಕಾರ್ಯಾಚರಣೆಯಲ್ಲಿದ್ದರು.