ಜಿಲ್ಲೆ

ಬೀಗ ಮುರಿದು ಚಿನ್ನಾಭರಣಗಳ ಕಳವು

ಚನ್ನರಾಯಪಟ್ಟಣ:  ತಾಲೂಕಿನ ಗೋವಿಕೆರೆ ಗ್ರಾಮದ ಕುಪ್ಪೇಗೌಡ ತಮ್ಮ ಪತ್ನಿ ಶಿವಮ್ಮ ಜತೆ ಜಮೀನಿನ ಬಳಿ ದನಗಳನ್ನು ಕಟ್ಟಲು ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಮಂಗಳವಾರ ಬೆಳ್ಳಗ್ಗೆ ಜಮೀನಿನ ಹತ್ತಿರ ದನಗಳನ್ನು ಕಟ್ಟಲು ಹೋದಾಗ ಕಳ್ಳರು ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 10 ಗ್ರಾಂ ತೂಕದ ಚಿನ್ನದ ಓಲೆ, 17ಗ್ರಾಂ ತೂಕದ ಚಿನ್ನದ ಮಾಟಿಗಳು ಸೇರಿ ಸುಮಾರು 60 ಗ್ರಾಂ ತೂಕದ 3 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಮಧ್ಯಾಹ್ನ ಸುಮಾರು 12.30ಕ್ಕೆ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.