ಬಾಗಲಕೋಟೆ: ಬಿವಿವಿ ಸಂಘ ತನ್ನ ಶಿಕ್ಷಣ ದಾಸೋಹದಿಂದ ಹೆಸರುವಾಸಿಯಾಗಿದ್ದು, ಬಾಗಲಕೋಟೆಗೆ ಸಂಘವು ಮುಕುಟಪ್ರಾಯವಿದ್ದಂತೆ. ಈ ಭಾಗದಲ್ಲಿ ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಕಡೆ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಹೇಳಿದರು.
ನಗರದ ಬಿವಿವಿ ಸಂಘದ ವತಿಯಿಂದ ಗುರುವಾರ ಬೀಳೂರ ಗುರುಬಸವ ಸಭಾಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಿವಿವಿ ಸಂಘವು ಈ ಭಾಗದಲ್ಲಿ ದೊಡ್ಡ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದು, ಇಲ್ಲಿ ಕಲಿತರು ಹಲವರು ಉನ್ನತ ಸ್ಥಾನಕ್ಕೆ ಏರಿದ್ದು ಇನ್ನೂ ಹೆಚ್ಚಿನ ಸಾಧನೆಯನ್ನು ಶಿಕ್ಷಣ ರಂಗದಲ್ಲಿ ಸಂಸ್ಥೆ ಮಾಡಲಿ ಎಂದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಎಸ್ಪಿ ಜಯಪ್ರಕಾಶ ಅವರು ಜಿಲ್ಲೆಗೆ ಎಸ್ಪಿಯಾಗಿ ಬಂದ ನಂತರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೆಲಸ ಮಾಡಿದ್ದಾರೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಸಹಜ. ಹೀಗಾಗಿ ಅವರು ಮುಂದಿನ ಸೇವೆ ಉತ್ತಮವಾಗಲಿ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹಾಸ್ಟೇಲ್ ಕಮಿಟಿ ಚೇರಮನ್ ಕುಮಾರ ಹಿರೇಮಠ(ಚಿತ್ತರಗಿ), ಸದಸ್ಯರಾದ ಪ್ರಭು ಸರಗಣಾಚಾರಿ, ವೀರಣ್ಣ ಹಲಕುರ್ಕಿ, ರುದ್ರಣ್ಣ ಅಕ್ಕಿಮರಡಿ ಇದ್ದರು.