ಬಾಗಲಕೋಟೆ:ಅಕ್ಷರ ಪ್ರಜ್ಞೆಯ ಲೋಕಕ್ಕೆ ತಮ್ಮನ್ನು ತಾವು ಸಮರ್ಪಸಿಕೊಂಡ ಜ್ಞಾನದ ನಕ್ಷತ್ರಗಳನ್ನು ಆರಾಽಸುವ ಒಂದು ಕೀರ್ತಿ ಬಿವಿವಿ ಸಂಘಕ್ಕೆ ಇದೆ. ಹೀಗಾಗಿ ಇದು ಕನ್ನಡ ನಾಡಿನ ಅತಿ ದೊಡ್ಡ ಜ್ಞಾನದ ಕೀತಿಜವಾಗಿದೆ ಎಂದು ಎಂದು ಕನ್ನಡ ಅಭಿವೃದ್ಧಿ ಪ್ರಾಽಕಾರದ ಸಶಕ್ತ ಭಾಷಾನೀತಿ ತಜ್ಞರ ಸಮಿತಿಯ ಸದಸ್ಯ ಡಾ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಭಾನುವಾರ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಐಕ್ಯೂಎಸಿ, ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ವಿವಿಧ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿ.ಎಸ್ ನಂದಿಮಠ, ಬಿ.ಕೆ.ಹಿರೇಮಠ, ಡಾ.ಗುರುಲಿಂಗ ಕಾಪಸೆ ಅವರಂಥ ವಿದ್ವಾಂಸರನ್ನು ಹೊಂದಿದ ಬಿವಿವಿ ಸಂಘ ಇಂದು ಜಾತಿ ಬೇದವಿಲ್ಲದೆ ಶಿಕ್ಷಕ ನೀಡುತ್ತಿದೆ. ಹಿಂದುಳಿದ ವರ್ಗದವರು ಹಾಗೂ ಅಲೆಮಾರಿಗಳಿಗೂ ಸ್ಥಾನಮಾನ ಸಿಗಬೇಕು ಅವರು ಬೆಳೆಯಬೇಕು ಎನ್ನುವ ಆಶಯ ಡಾ.ವೀರಣ್ಣ ಚರಂತಿಮಠ ಹೊಂದಿದ್ದಾರೆ ಎಂದರು.
ವಿದ್ಯಾರ್ಥಿಗಳು ಪ್ರವೇಶಗೊಳ್ಳುವಂತ ಈ ನೆಲದ ಶಾಲೆ, ಕಾಲೇಜು ಮತ್ತು ಆ ವಿದ್ಯಾ ಸಂಸ್ಥೆಯ ಮಹತ್ವ ತಿಳಿದುಕೊಂಡಾಗ ಅಭಿನಾಭಾವತೆ, ಅಭಿಮಾನ, ಅನ್ಯುನ್ಯತೆ ಆ ಪ್ರೀತಿ ಅವರಿಗೆ ಇಲ್ಲಿ ಸಿಗುತ್ತದೆ. ಇದರಿಂದ ಮನಸ್ಸು ಅರಳಿ ಜ್ಞಾನ ಮೂಡುತ್ತದೆ, ವಾಣಿಜ್ಯ ವಿದ್ಯಾರ್ಥಿಗಳು ತಾವು ಕಲಿಯುವ ಶಿಕ್ಷಣ ತಮ್ಮ ಹೃದಯದ ಕನ್ನಡಿಯಿದ್ದಂತೆ ಎಂದ ಅವರು ಇಂದಿನ ಕಾಲದಲ್ಲಿ ವಿದ್ಯಯನ್ನು ಆರಾಽಸುವ ಮನುಸ್ಸುಗಳ ಅವಲೋಕನ ಅಗತ್ಯವಾಗಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಗೆಳು ಅಗತ್ಯವಾಗಿವೆ ಎಂದು ತಿಳಿಸಿದರು.
ಪ್ರೊ.ನಂಜುಂಡಸ್ವಾಮಿ, ಕ್ರೀಡಾ ವಿಭಾಗದ ಡಾ.ಎಸ್.ಎಸ್,ಕೋಟ್ಯಾಳ, ಸಾಂಸ್ಕೃತಿಕ ವಿಭಾಗದ ರಾಜು ಮೇಲಿನಮನಿ, ಐಕ್ಯೂಎಸಿ ಸಂಯೋಜಕಿ ಜಿ.ಎಂ.ನಾವದಗಿ ಸೇರಿದಂತೆ ಇತರರು ಇದ್ದರು.