ಮಧುಗಿರಿ: ಶನಿವಾರ ಮಧ್ಯಾಹ್ನ ಅಬ್ಬರಿಸಿ ಬಿರುಗಾಳಿಯಿಂದ ಮಹಿಳೆ ಸೇರಿ ನಾಲ್ವರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಟ್ಟಣದ ಎಪಿಎಂಸಿ ರಸ್ತೆಯಲ್ಲಿ ಬಿರುಗಾಳಿ ವ್ಯಾಪಿಸಿ ಮಧುಗಿರಿ&-ಗೌರಿಬಿದನೂರು ರಸ್ತೆಯ ಆದ್ವೈತ ಶಾಲೆಯ ಮುಂಭಾಗದಲ್ಲಿದ್ದ ಕಬ್ಬಿಣದ ಪೆಟ್ಟಿಗೆ ಅಂಗಡಿ ಹಾರಿ ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಬಿರುಗಾಳಿಗೆ ಸಿಲುಕಿಕೊಂಡು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.