ಮುಂಜನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ವಾಸದ ಮನೆಯ ಛಾವಣಿ ಹಾರಿಹೋಗಿರುವುದು. 
ಜಿಲ್ಲೆ

ಬಿರುಗಾಳಿಗೆ ಹಾರಿ ಹೋದ ಛಾವಣಿ

ಸಾಲಿಗ್ರಾಮ: ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಶನಿವಾರ ಭಾರಿ ಬಿರುಗಾಳಿ ಮಳೆಗೆ ಮನೆ ಛಾವಣಿ ಹಾರಿಹೋಗಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮದ ತಾಯಮ್ಮ ರಾಜನಾಯಕ ಎಂಬುವರ ಮನೆ ಮಳೆ ಹಾನಿಗೆ ತುತ್ತಾಗಿದೆ. ಇದೀಗ ಸೂರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 30 ಮೂಟೆ ಸಿಮೆಂಟ್, 20 ಚೀಲ ರಾಗಿ, ಭತ್ತ ಸೇರಿದಂತೆ ಗೃಹಬಳಕೆ ವಸ್ತುಗಳು ಮತ್ತು ಆಹಾರ ಪದಾರ್ಥಗಳು ನೀರು ಪಾಲಾಗಿದೆ. ತಾಯಮ್ಮ ಅವರು ಸಾಲ ಮಾಡಿ ಇತ್ತೀಚೆಗೆ ಮನೆ ನಿರ್ಮಿಸಿಕೊಂಡಿದ್ದರು.

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಾವು ವಾಸ ಮಾಡಲು ಒಂದು ಮನೆಯನ್ನು ಸಾಲ ಮಾಡಿ ಕಟ್ಟಿಕೊಂಡಿದ್ದೆವು. ಆದರೆ ಬಿರುಗಾಳಿ ಮಳೆಗೆ ಎಲ್ಲವೂ ನಷ್ಟವಾಗಿದೆ. ಸರ್ಕಾರ ಒಂದು ಮನೆ ಮತ್ತು ಪರಿಹಾರವನ್ನು ಒದಗಿಸಿಕೊಡುವಂತೆ ತಾಯಮ್ಮ ಮನವಿ ಮಾಡಿದ್ದಾರೆ.