ಜಿಲ್ಲೆ

ಬಿರುಗಾಳಿಗೆ ಮನೆ ಮೇಲೆ ಬಿದ್ದ ಮರ

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೀಗೆಬೆಟ್ಟ ಪೋಡಿನಲ್ಲಿ ಬಿರುಗಾಳಿಗೆ ದೊಡ್ಡ ಮರವೊಂದು ಮನೆಯ ಮೇಲೆ ಬಿದ್ದು ಜಖಂಗೊಂಡಿದೆ. ಮಹದೇವ ಎಂಬುವವರ ಮನೆಯ ಮೇಲೆ ಶುಕ್ರವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ದೊಡ್ಡ ಮರವೊಂದು ಬಿದ್ದಿದೆ. ಇವರ ಇಬ್ಬರು ಮಕ್ಕಳು ಹಾಗೂ ತಾಯಿ ಮನೆಯಲ್ಲಿದ್ದರು. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಶೀಟು ಹಾಗೂ ಗೋಡೆಗಳು ಸಂಪೂರ್ಣವಾಗಿ ಜಖಂಗೊಂಡಿವೆ.