ಮಂಗಳೂರು : ನಗರದ ಆ್ಯಂಟಿ ಪೊಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) ವತಿಯಿಂದ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಒಂಬತ್ತು ಕುಟುಂಬಗಳಿಗೆ ಉಚಿತ ಶೌಚಾಲಯಗಳನ್ನು
ಹಸ್ತಾಂತರಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್.ರಾವ್, ಉಪಾಧ್ಯಕ್ಷ ಸುರೇಶ್ ಕನ್ನೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಕಚೇರಿ ಸಿಬ್ಬಂದಿ ಹೊನ್ನಪ್ಪ ಪೂಜಾರಿ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಕೂಸಪ್ಪ ಪೂಜಾರಿ, ಎಪಿಡಿ ಪ್ರತಿಷ್ಠಾನದ ಸಾರ್ವಜನಿಕ ಸಂಪರ್ಕ ಸಮನ್ವಯಾಧಿಕಾರಿ ಭಾಸ್ಕರ ಅರಸ, ಯೋಜನಾ ಸಂಯೋಜಕಿ ಗೀತಾ ಸೂರ್ಯ ಉಪಸ್ಥಿತರಿದ್ದರು.
ಕಡೇಶ್ವಾಲ್ಯ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿರುವ 11 ಬಿಪಿಎಲ್ ಕುಟುಂಬಗಳಿಗೆ ಉಚಿತ ಶೌಚಾಲಯ ಕೋರಿ ಎಪಿಡಿ ಪ್ರತಿಷ್ಠಾನವನ್ನು ಸಂಪರ್ಕಿಸಿತ್ತು. ಎಪಿಡಿ ಪ್ರತಿಷ್ಠಾನದ ಪ್ರತಿ ಮನೆಗೆ ಶೌಚಾಲಯ ಯೋಜನೆಯಡಿ ಈ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
2025ರ ಮಾರ್ಚ್ ಅಂತ್ಯದ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ 100 ಬಿಪಿಎಲ್ ಕುಟುಂಬಗಳಿಗೆ ಶೌಚಾಲಯ ಒದಗಿಸುವ ಗುರಿ ಹೊಂದಲಾಗಿದೆ. ಪ್ರತಿಷ್ಠಾನದ ವತಿಯಿಂದ ಇದುವರೆಗೆ 22 ಶೌಚಾಲಯಗಳನ್ನು ಪೂರ್ಣಗೊಳಿಸಲಾಗಿದೆ. . ದಕ್ಷಿಣ ಕನ್ನಡ ಅಧಿಕೃತವಾಗಿ ಬಯಲು ಶೌಚ ಮುಕ್ತ ಜಿಲ್ಲೆಯಾಗಿದ್ದರೂ, ಇನ್ನೂ ಸರಿಯಾದ ನೈರ್ಮಲ್ಯ ಹೊಂದಿಲ್ಲ. ಎಪಿಡಿ ಪ್ರತಿಷ್ಠಾನ ಸ್ಥಳೀಯ ಗ್ರಾಮ
ಪಂಚಾಯತ್‌ಗಳೊಂದಿಗೆ ನಿಕಟವಾಗಿ ಈ ಕೊರತೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಎಂದು ಎಂದು ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.