ಜಿಲ್ಲೆ

ಬಿಪಿಎಲï ಕುಟುಂಗಳಿಗೆ ಉಚಿತ ಚಿಕಿತ್ಸೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಕಿಮೋಥೆರಪಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿ ಜಾನಕಿ ಕೆ.ಎಂ. ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕ್ಯಾನ್ಸರ ಪ್ರಕರಣಗಳು ಹೆಚ್ಚುತ್ತಿದ್ದು, ಬಡವರು ಕಡಿಮೆ ವೆಚ್ಚದಲ್ಲಿ ಕ್ಯಾನ್ಸರಗೆ ಚಿಕಿತ್ಸೆ ಪಡೆಯಬೇಕು. ಅಂದರೆ ಬೆಂಗಳೂರಿನ ಕಿದ್ವಾಯಿ ಅಂತಹ ಸಂಸ್ಥೆಗಳಿಗೆ ಹೋಗುವ ಪರಿಸ್ಥಿತಿ ಇದೆ, ಅದರಲ್ಲು ಕ್ಯಾನ್ಸರ್‌ನ ಶಸö ಚಿಕಿತ್ಸೆಯ ನಂತರ ಕೆಮೋಥೆರಪಿ ಚಿಕಿತ್ಸೆಗೆ ಮೇಲಿಂದ ಮೇಲೆ ಬೆಂಗಳೂರು, ಹುಬ್ಬಳ್ಳಿ ಬೆಳಗಾವಿಗೆ ಹೋಗುತ್ತಿದ್ದು, ಈ ಕೇಂದ್ರದಿ0ದ ಅಲೇದಾಡುವುದು ತಪ್ಪಲಿದೆ ಎಂದರು.

ಈ ಕೇಂದ್ರದಲ್ಲಿ ಸದರಿಯಾಗಿ ೨ನೇ ಕೆಮೋಥೆರಪಿ ಸೈಕಲï ನಿಂದ ಚಿಕಿತ್ಸೆಯನ್ನು ಪ್ರಾರಂಭಿಸಲಾಗುತ್ತಿದ್ದು, ಅದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ರಾಜ್ಯದ ೧೬ ಜಿಲ್ಲಾ ಆಸ್ಪತ್ರೆಗಳಿಗೆ ಡೇ ಕೇತ್ ಕಿಮೋಥೇರಪಿ ಕೇಂದ್ರಕ್ಕೆ ಸರ್ಕಾರ ಚಾಲನೆ ನೀಡಿದೆ. ಅದರನ್ವಯ ಬಾಗಲಕೋಟೆ ಜಿ¯್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಹಬ್ ಆ್ಯಂಡ್ ಸ್ಪೋಕ್ ಮಾಡೆಲನಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಎಸ್‌ಎನ್‌ಎಂಸಿ ಮೆಡಿಕಲï ಕಾಲೇಜï ಸಹಯೋಗದೊಂದಿಗೆ ಡೇ ಕೇರ್ ಕಿಮೋಥೇರಪಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕದಡಿಯಲ್ಲಿ ಬಿಪಿಎಲï ಕುಟುಂಗಳಿಗೆ ಉಚಿತ ಚಿಕಿತ್ಸೆಗೆ ಹಾಗೂ ಉಚಿತವಾಗಿ ಕೀಮೋಥೆರಪಿ ಸೇವೆ ಸಿಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಡಾ. ಮಂಜುನಾಥ ಡಿ.ಎನ್, ಜಿಲ್ಲಾ ಶಸö ಚಿಕಿತ್ಸಕ ಡಾ. ಮಹೇಶ ಕೆ., ಜಿಲ್ಲಾ ಸರ್ವೇಕ್ಷಣ ಅಽಕಾರಿಗಳಾದ ಡಾ. ದಯಾನಂದ ಕರೆನವರ, ಕಾರ್ಯಕ್ರಮ ಅಽಕಾರಿಗಳಾದ ಡಾ. ಕುಸುಮ ಮಾಗಿ, ಎಸ್‌ಎನ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಶ್ರೀರಾಮ ಕೋರಾ, ಕ್ಯಾನ್ಸರ ತಜ್ಞ ಡಾ. ಬಸವರಾಜ ಅನ್ಕಲಕೋಟ, ಡಾ.ವಿಕಾಸ ಪರ್ವತಿಕರ, ಆರ್.ಎಂಓ.ಯರಗಾ0ವಿ, ಡಾ.ಗಿರೀಶ ಸಂಗಮ, ಜಿಲ್ಲಾ ಎನ್‌ಸಿ ಡಿ ಘಟಕದ ಕಾರ್ಯಕ್ರಮ ಸಂಯೋಜಕ ಡಾ.ಅಂದಾನಗೌಡ ವಿ ಪಾಟೀಲ ಇದ್ದರು.