ಕೊಡಗು : ಎಸ್.ಎಸ್.ಕಲಾ ಸಂಗಮದಿಂದ ಮಿಸ್, ಮಿಸ್ಸೆಸ್ ಆ್ಯಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.
ಮಡಿಕೇರಿ ತಾಲೂಕಿನ ಚೆಯ್ಯಂಡಾಣೆಯ ಕೋಕೇರಿ ಗ್ರಾಮದ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಅವರ ಪುತ್ರಿ ಬಿದ್ದಂಡ ಸುರಕ್ಷಿತಾ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಮಿಸ್ ಮೈಸೂರ್ ಫ್ಯಾಷನ್ ಕಾರ್ಯಕ್ರಮದಲ್ಲಿ 20 ಸ್ಪರ್ಧಿಗಳ ಪೈಕಿ ಸುರಕ್ಷಿತಾ ಟ್ರೇಡಿಷನಲ್ ಮತ್ತು ವೆಸ್ಟೆರ್ನ್‌ನಲ್ಲಿ ಕೊಡವ ಸೀರೆ ಧರಿಸಿ ಕೂರ್ಗ್ ಕೊಡವತಿ ಆಗಿ ಭಾಗವಹಿಸಿದ್ದರು. ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ.
ಕಾರ್ಯಕ್ರಮದ ತೀರ್ಪುಗಾರರಾಗಿ ಸತ್ಯವತಿ ಬಸವರಾಜ್, ಭುವನ ಸುಂದರಿ-2022 ವಿನ್ನರ್ ಜ್ಯೋತಿ ಬಿಹಲ್, ಖ್ಯಾತ ಡಿಸೈನರ್ ವರ್ಷಾ, ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ ಇತರರು ಇದ್ದರು.