ಜಿಲ್ಲೆ

ಬಿತ್ತನೆ ಬೀಜ ವಿತರಣೆಗೆ 13 ಹೆಚ್ಚುವರಿ ಕೇಂದ್ರ ಸ್ಥಾಪನೆ

ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 31810 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದ್ದು, ವಿತರಣೆಗಾಗಿ ಹೋಬಳಿ ಮಟ್ಟದ 22 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಚಳ್ಳಕೆರೆ ತಾಲೂಕು ಸಾಣೀಕೆರೆ, ಪರಶುರಾಂಪುರ, ನಾಯಕನಹಟ್ಟಿ, ದೊಡ್ಡಉಳ್ಳಾರ್ತಿ, ದೇವರಡ್ಡಿಹಳ್ಳಿ, ತಳಕು, ರೇಣುಕಾಪುರದ ಎಫ್‌ಪಿಒ, ಹಿರಿಯೂರು ತಾಲೂಕು ಯರಬಳ್ಳಿ, ಅಬ್ಬಿನಹೊಳೆ, ಧರ್ಮಪುರ. ಮೊಳಕಾಲ್ಮೂರು ತಾಲೂಕು ರಾಂಪುರ ಮತ್ತು ಈ ತಾಲೂಕಿನ ಎಫ್‌ಪಿಒ ಮತ್ತು ಕೆಒಎಫ್‌ನ ತಲಾ ಒಂದು ವಿತರಣಾ ಕೇಂದ್ರ ಸೇರಿ 13 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ 32526 ಟನ್ ವಿವಿಧ ರಸಗೊಬ್ಬರ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.