ಎನ್.ಆರ್.ಪುರ ರೋಟರಿ ಕ್ಲಬ್ ಸಭೆಯಲ್ಲಿ ಜಾನುವಾರುಗಳಿಗೆ ರೇಡಿಯಂ ಕಾಲರ್ ಅಳವಡಿಕೆ ಕುರಿತು ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ ಮಾಹಿತಿ ನೀಡಿದರು. ಎನ್.ಟಿ.ಶೇಷಾಚಲ, ಎಂ.ವಿ.ಮಧು, ಕಣಿವೆ ವಿನಯ್, ಮನೀಶ, ಲೋಕೇಶ್, ಎಚ್.ಡಿ.ವಿನಯ್ ಇದ್ದರು. 
ಜಿಲ್ಲೆ

ಬಿಡಾಡಿ ಜಾನುವಾರುಗಳಿಗೆ ರೇಡಿಯಂ ಕಾಲರ್

ಎನ್.ಆರ್.ಪುರ: ರಸ್ತೆಗಳಲ್ಲಿ ಬಿಡಾಡಿ ಜಾನುವಾರುಗಳು ಹೆಚ್ಚಾಗುತ್ತಿರುವುದರಿಂದ ಅಪಘಾತಗಳು ಸಹ ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ಪಶು ಇಲಾಖೆ ಸಹಕಾರದಿಂದ ಜಾನುವಾರುಗಳ ಕುತ್ತಿಗೆಗೆ ರೇಡಿಯಂ ಕಾಲರ್ ಅಳವಡಿಸುತ್ತಿದ್ದೇವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ ತಿಳಿಸಿದರು.

ರೋಟರಿ ಕ್ಲಬ್ ಹಾಲ್‌ನಲ್ಲಿ ಪಶು ಆಸ್ಪತ್ರೆ ಹಸು ಪರೀಕ್ಷಕ ಎನ್.ಟಿ.ಶೇಷಾಚಲ ಪಶು ಇಲಾಖೆಯಿಂದ ಸಿಗುವ ಹುಲ್ಲು ಕಟಾವು ಯಂತ್ರ, ಮೇವಿನ ಬೀಜ ಹಾಗೂ ಕಾಲುಬಾಯಿ ಜ್ವರದ ಬಗ್ಗೆ ಮಾಹಿತಿ ನೀಡಿದರು. ಪಟ್ಟಣದ ಬೀದಿಗಳಲ್ಲಿರುವ ಜಾನುವಾರುಗಳಿಗೆ ರೇಡಿಯಂ ಕಾಲರ್ ಅಳಡಿಸಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ವಿ.ಮಧು, ಖಚಾಂಚಿ ಎಸ್.ಎಸ್.ಶಾಂತಕುಮಾರ್, ಸದಸ್ಯರಾದ ಧನಂಜಯ, ಎಂ.ಆರ್.ಸುಂದರೇಶ್, ಕಣಿವೆ ವಿನಯ, ಮನೀಶ್, ಲೋಕೇಶ್, ಎಚ್.ಡಿ.ವಿನಯ, ಸೋಮಶೇಖರ್, ಚೇತನ್, ಬೆಮ್ಮನೆ ಮನೋಜ್ ಇದ್ದರು.