ಜಿಲ್ಲೆ

ಬಿಡದಿಯಲ್ಲಿ ಕರ್ಫ್ಯೂ ನಿಯಮ ಉಲ್ಲಂಘನೆ

ಬಿಡದಿ: ಅಗತ್ಯ ಸಾಮಗ್ರಿ ಖರೀದಿ ನೆಪದಲ್ಲಿ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗಿ ಕರೊನಾ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದು, ಸಾರ್ವಜನಿಕರು ವೀಕೆಂಡ್ ಕರ್ಫ್ಯೂವನ್ನು ಗಾಳಿಗೆ ತೂರಿದ್ದಾರೆ. ಭಾನುವಾರದಂದು ಅಗತ್ಯ ವಸ್ತುಗಳು ಖರೀದಿ ನೆಪದಲ್ಲಿ ಮೀನು ಮಾರಾಟ, ಮಾಟ್ಟೆ ಮಾರಾಟ, ಕೋಳಿ, ಮಾಂಸ ಮಾರಾಟ, ಮದ್ಯದ ಅಂಗಡಿಗಳು ಕೈಗಾಡಿಗಳು, ಪೆಟ್ಟಿ ಅಂಗಡಿಗಳು, ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು, ಹಣ್ಣಿನ ಅಂಗಡಿಗಳು ಇಷ್ಟೆಲ್ಲಾ ಅಂಗಡಿಗಳನ್ನು ತೆರೆದಿರುವದರಿಂದ ಜನ ಗುಂಪು ಗುಂಪಾಗಿ ರಸ್ತೆಗಳಲ್ಲಿ ಯಾರೊಬ್ಬರೂ ಮಾಸ್ಕ್ ಕೂಡ ಹಾಕದೆ ಓಡಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಅಂಗಡಿಗಳು ಅಂದರೆ ಪುಸ್ತಕದ ಅಂಗಡಿಗಳು, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಸರ್ಕಾರದ ಇಂತಹ ಅವೈಜ್ಞಾನಿಕ ಆದೇಶಗಳಿಂದ ಏನು ಲಾಭ ಎಂದು ಅರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಮೂಗು ಮುರಿಯುತ್ತಿದ್ದಾರೆ.

ಎಲ್ಲ ವ್ಯಾಪಾರಿಗಳಿಗೂ ಮಧ್ಯಾಹ್ನ 12 ಗಂಟೆಯ ತನಕ ಸಮಯ ನಿಗದಿ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು, ನಂತರ ಬಂದ್ ಮಾಡಿದರೆ ಯಾರೊಬ್ಬರೂ ಮನೆಯಿಂದ ಹೊರಗಡೆ ಬರುವುದಿಲ್ಲ. ರಸ್ತೆಗಳಲ್ಲಿ ಜನರು ಸಹ ಓಡಾಟ ಇರುವುದಿಲ್ಲ. ಆಗ ಕರೊನಾ ನಿಯಂತ್ರಣದ ಸರ್ಕಾರದ ಉದ್ದೇಶ ಸ್ವಲ್ಪ ಮಟ್ಟಿಗೆ ಈಡೇರಬಹುದು. ಮುತ್ತಣ್ಣ, ವ್ಯಾಪಾರಿ, ಸಾಮಾಜಿಕ ಕಾರ್ಯಕತ, ಬಿಡದಿ