ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಿಧಾನಸಭೆ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆ ಹರಿಸಿದರೂ ಸಹ ಜನರು ಅವರಿಂದ ಹಣ ಪಡೆದು, ಕಾಂಗ್ರೆಸ್ಗೆ ಮತ ಹಾಕಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಖಚಿತ. ಮೂರು ಕ್ಷೇತ್ರಗಳಲ್ಲಲೂ ಜಯಭೇರಿ ಬಾರಿಸುತ್ತೇವೆ ಎಂದರು.
ವಕ್ಪ್ ಆಸ್ತಿ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ನೋಟಿಸ್ ಈಗಲೂ ಮುಂದುವರಿದಿದೆ. ಕಾಂಗ್ರೆಸ್ ರೈತರ ವಿರೋಧಿ ಅಲ್ಲ. ರೈತ ವಿರೋಧಿಯಾಗಿದ್ದರೆ ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ 22 ಲಕ್ಷ ಹೆಕ್ಟೇರ್ ಜಮೀನು ರೈತರಿಗೆ ನೀಡುತ್ತಿರಲಿಲ್ಲ ಎಂದರು.
ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿ ಹೋರಾಟ ಮಾಡುವುದು ಸಾಮಾನ್ಯ. ಚುನಾವಣೆ ಇರುವುದರಿಂದ ಮಾಡುತ್ತಿದ್ದಾರೆ. ಮೂರು ಉಪಚುನಾವಣೆ ಮುಗಿದ ಬಳಿಕ ಎಲ್ಲವನ್ನೂ ಬಿಟ್ಟು ಮನೆಗೆ ಹೋಗುತ್ತಾರೆ ಎಂದು ಟೀಕಿಸಿದರು.