ಜಿಲ್ಲೆ

ಬಿಜೆಪಿಯಿಂದ ಚುನಾವಣೆ ನಿರ್ವಹಣಾ ಸಮಿತಿ

ಹುಬ್ಬಳ್ಳಿ: ವಿಧಾನ ಪರಿಷತ್​ಗೆ ಪಶ್ಚಿಮ ಪದವೀಧರರ ಮತಕ್ಷೇತ್ರದಿಂದ ನಡೆಯಲಿರುವ ಚುನಾವಣೆ ಗೆಲ್ಲುವುದಕ್ಕಾಗಿ ಮಹಾನಗರ ಜಿಲ್ಲಾ ಬಿಜೆಪಿಯಿಂದ ಚುನಾವಣೆ ನಿರ್ವಹಣಾ ಸಮಿತಿ ರಚಿಸಲಾಗಿದೆ.

ಇಲ್ಲಿನ ದೇಶಪಾಂಡೆ ನಗರದ ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಈ ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಕೇವಲ 15 ದಿನ ಬಾಕಿ ಇವೆ. ಜನರಲ್ಲಿ ಇರುವ ಕರೊನಾ ಸೋಂಕಿನ ಆತಂಕ ದೂರ ಮಾಡಿ, ಅವರನ್ನು ಮತಕೇಂದ್ರಗಳತ್ತ ಕರೆತರುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.

ಅಭ್ಯರ್ಥಿ ಎಸ್.ವಿ. ಸಂಕನೂರ, ಮುಖಂಡರಾದ ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ರಾಜಕುಮಾರ ಬಸವಾ, ಎಂ.ಆರ್. ಪಾಟೀಲ, ಸತೀಶ ಶೇಜವಾಡಕರ, ಪ್ರಭು ನವಲಗುಂದಮಠ, ಬಸವರಾಜ ಗರಗ, ರವಿ ನಾಯಕ, ಸಿದ್ದು ಮೊಗಲಿಶೆಟ್ಟರ, ಈರೇಶ ಅಂಚಟಗೇರಿ, ಸಂಜಯ ಕಪಟಕರ, ಕೃಷ್ಣ ಗಂಡಗಾಳೆಕರ, ಶಿವು ಮೆಣಸಿನಕಾಯಿ, ಉಮಾ ಮುಕುಂದ, ಸೀಮಾ ಲದ್ವಾ, ವಿಶ್ವನಾಥ ಸೋಮಾಪೂರ ಇತರರಿದ್ದರು.