ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್ ವಿವಾದ ಎದ್ದಾಗ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದರು. ಕುಮಾರಸ್ವಾಮಿ ಮಾತ್ರ ಬೆಂಬಲಕ್ಕೆ ನಿಂತರು. ಮೇಲ್ನೂಟಕ್ಕೆ ಮಾತ್ರ ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿ ವರ್ತಿಸುತ್ತದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಬಾರದು ಎಂದು ಜಿಡಿಎಸ್ ವಕ್ತಾರೆ ನಜ್ಮಾ ನಜೀರ ಹೇಳಿದರು.
ನವನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಜಾರಿಗೊಳಿಸಿದ್ದು ದೇವೇಗೌಡರು. ಇಂದಿನ ಬಿಜೆಪಿ ಸರ್ಕಾರ ಅದಕ್ಕೆ ಕತ್ತರಿ ಹಾಕುತ್ತಿದೆ. ಉದ್ಯೋಗ ಕೊಡಿ ಅಂತ ಯುವ ಜನತೆ ಮನವಿ ಮಾಡಿದರೇ ಮೋದಿ ಪಕೋಡಾ ಮಾರಿ ಅಂತ ಹೇಳುತ್ತಾರೆ. ಸರ್ಕಾರಿ ಉದ್ಯೋಗ ಭರ್ತಿ ಮಾಡುತ್ತಿಲ್ಲ. ಬಿಜೆಪಿ ಸಮಾಜದಲ್ಲಿ ಕೋಮು ಧ್ವೇಷ ಹುಡ್ಡು ಹಾಕುತ್ತಿದೆ. ಆದ್ದರಿಂದ ಒಳ್ಳೆಯ ಬದುಕು ಕೊಟ್ಟಿಕೊಡುತ್ತೇವೆ ಅಂದವರಿಗೆ ಮಾತ್ರ ಜನ ಮತ ನೀಡಬೇಕು. ಮಾಜಿ ಸಿಎಂ ಕುಮಾರಸ್ವಾಮಿ ನಾಡಿನ ಜನತೆಗೆ ಉತ್ತಮ ಆಡಳಿತ ನೀಡುವ ಬಯಕೆ ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.