ಜಿಲ್ಲೆ

ಬಿಜೆಪಿಯಿಂದ 12.50 ಲಕ್ಷ ರೂ. ನೆರವು

ಹಾನಗಲ್ಲ: ತಾಲೂಕಿನ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಟ್ಟು 12.50 ಲಕ್ಷ ರೂ. ಸಂಗ್ರಹಿಸಿ ಶಾಸಕ ಸಿ.ಎಂ. ಉದಾಸಿ ಅವರ ನೇತೃತ್ವದಲ್ಲಿ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.

ತಾಲೂಕಿನ ತಿಳವಳ್ಳಿ ಮಹಾಶಕ್ತಿ ಕೇಂದ್ರದಿಂದ 1,16,100 ರೂ, ಆಡೂರು ಶಕ್ತಿ ಕೇಂದ್ರದಿಂದ 1,31,500 ರೂ, ಬೊಮ್ಮನಹಳ್ಳಿ ಶಕ್ತಿ ಕೇಂದ್ರದಿಂದ 1,34,500ರೂ, ಅಕ್ಕಿಆಲೂರು ಶಕ್ತಿ ಕೇಂದ್ರದಿಂದ 5 ಲಕ್ಷ ರೂ, ಹೀರೂರ ಶಕ್ತಿ ಕೇಂದ್ರದಿಂದ 34 ಸಾವಿರ ರೂ, ಹಾನಗಲ್ಲ ಮಹಾಶಕ್ತಿ ಕೇಂದ್ರದಿಂದ 1,53,000ರೂ, ನರೇಗಲ್ ಶಕ್ತಿ ಕೇಂದ್ರದಿಂದ 1,82,000 ರೂ. ಸಂಗ್ರಹಿಸಲಾಗಿದೆ.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಗೌಳಿ ಮಾತನಾಡಿ, ‘ಪ್ರತಿ ಬೂತ್​ನಿಂದ 10 ಸಾವಿರ ರೂ. ಸಂಗ್ರಹಿಸುವಂತೆ ರಾಷ್ಟ್ರಾಧ್ಯಕ್ಷ ಜಿ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಆದೇಶಿಸಿದ್ದರು. ಅದರಂತೆ ಜಿಲ್ಲಾ ಪಿಎಂ ಕೇರ್ ಸಂಚಾಲಕ ಶಿವರಾಜ ಸಜ್ಜನ ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಒಟ್ಟು 125 ಬೂತ್​ಗಳಿಂದ ನೂರು ಕಾರ್ಯಕರ್ತರಿಂದ ತಲಾ ನೂರು ರೂ.ನಂತೆ 12.50 ಲಕ್ಷ ರೂ. ಸಂಗ್ರಹಿಸಲಾಗಿದೆ’ ಎಂದರು.

ಪ್ರಮುಖರಾದ ಮನೋಜ ದೇಸಾಯಿ, ವಿಜಯೇಂದ್ರ ಕನವಳ್ಳಿ, ಶಿವಕುಮಾರ ದೇಶಮುಖ, ಪ್ರದೀಪ ಶೇಷಗಿರಿ, ಎಂ.ಪಿ. ಮೂಡೂರ, ನಿಜಲಿಂಗಪ್ಪ ಮುದಿಯಪ್ಪನವರ ಇತರರಿದ್ದರು.