ಜಿಲ್ಲೆ

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ

ಚಿತ್ರದುರ್ಗ: ಈವರೆಗೂ ಪ್ರತಿಪಕ್ಷ ನಾಯಕ ಆಯ್ಕೆಗೆ ವಿಫಲವಾಗಿರುವ ಬಿಜೆಪಿ,ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎ.ಎನ್.ನಟರಾಜ್‌ಗೌಡ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿಯ 66 ಶಾಸಕರಿದ್ದರೂ ನಾಯಕನ ಆಯ್ಕೆ ಅವರಿಂದ ಸಾಧ್ಯವಾಗದಿರುವುದು ಹಾಸ್ಯಾಸ್ಪದ.

ಬಿಜೆಪಿಯಲ್ಲಿ ಅಂತರಿಕ ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಪ್ರತಿಪಕ್ಷ ನಾಯಕ ಸ್ಥಾನಕ್ಕೂ ಕಪ್ಪ ಕೊಡಬೇಕೆ?ಬಿಜೆಪಿ ಎಲ್ಲ ಶಾಸಕರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಸಿಎಂ ಸಿದ್ದರಾಮಯ್ಯ ಉತ್ತ ಮ ಬಜೆಟ್‌ನ್ನು ಕೊಟ್ಟಿದ್ದಾರೆ ಎಂದು ಹರ್ಷಿಸಿದ ಅವರು,ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಫೀರ್,ಕೆ.ಪಿ.ಸಂತಪ್‌ಕುಮಾರ್,ಬಿ.ಟಿ.ಜಗದೀಶ್,ಜಿ.ಬಿ.ಬಾಲಕೃ ಷ್ಣ ಯಾದವ್,ಎನ್.ಡಿ.ಕುಮಾರ್,ಮುದಸೀರ್ ನವಾಜ್ ಮತ್ತಿತರರು ಇದ್ದರು.