ಜಿಲ್ಲೆ

ಬಿಜೆಪಿಯರ ನಿದ್ದೆಗೆಡಿಸಿದ ಕಂದಕೂರ ನಡೆ

ಯಾದಗಿರಿ: ಗಿರಿ ಜಿ¯್ಲೆಗೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದು ಅಲ್ಲದೆ ಜೆಡಿಎಸ್ ಪP್ಷÀದಿಂದ ಅದ್ದೂರಿಯಾಗಿ ಸನ್ಮಾನಿಸುವ ಮೂಲಕ ಗುರುಮಠಕಲï ಶಾಸಕ ಶರಣಗೌಡ ಕಂದಕೂರ ರಾಜಕೀಯ ವಿರೋಧಿಗಳಲ್ಲಿ ತಳಮಳ ಮೂಡಿಸುವ ಜತೆಗೆ ಕೇಸರಿಪಡೆಯವರ ನಿದ್ದೆ ಕದ್ದಿದ್ದಾರೆ.

ಮೈತ್ರಿ ಧರ್ಮ ಪಾಲನೆಗಾಗಿ ಹೀಗೆ ಮಾಡಿದರೋ ? ಅಥವಾ ಮುಂದಿನ ತಮ್ಮ ರಾಜಕೀಯ ನಡೆ ಗಟ್ಟಿ ಮಾಡಿಕೊಳ್ಳಲು ನಾಂದಿ ಹಾಡಿದರೋ ಎಂಬುದರ ಚರ್ಚೆ ಜಿ¯್ಲÉಯ ರಾಜಕಾರಣದ ಪಡಸಾಲೆಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ದೇಶದ ೧೧೨ ಮಹತ್ವಾಂಕ್ಷಿ ಜಿ¯್ಲÉಗಳ ಪೈಕಿ ಯಾದಗಿರಿ ಜಿ¯್ಲÉಯೂ ಒಂದು. ಇದರ ಅಭಿವೃದ್ಧಿಯ ಬಗ್ಗೆ ಸಾಧಕ - ಭಾದಕಗಳನ್ನು ಪರಿಶೀಲಿಸಲು ಜಿ¯್ಲÉಗೆ ಬಂದಿದ್ದ ಸಚಿವರ ಜತೆ ಸ್ವಪP್ಷÀದವರಿಗಿಂತ ಮೈತ್ರಿ ಪP್ಷÀದ ಈ ಶಾಸಕರೇ ಮುಂಚೂಣಿಯಲ್ಲಿ ನಿಂತು ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳು ಯಶಸ್ಸಿ ಮಾಡಿದ್ದು ಸಹ ಚರ್ಚೆ ಹುಟ್ಟು ಹಾಕಿದೆ.

ತಮ್ಮ ಕ್ಷೇತ್ರದಲ್ಲಿರುವ ಮಹತ್ವದ ರೈಲ್ವೆ ಕೋಚ್ ಕಾರ್ಖಾನೆ ಸಚಿವರಿಗೆ ತೋರಿಸಿ ಅದಕ್ಕಿಷ್ಟು ಶಕ್ತಿ ತುಂಬುವAತೆ ಮಾಡುವುದರ ಜತೆಗೆ ಸ್ಥಳೀಯ ಎರಡು ಸಾವಿರ ಜನರಿಗೆ ಉದ್ಯೋಗ ನೀಡಬೇಕೆಂಬ ಬಲವಾದ ಬೇಡಿಕೆ ಮಂಡಿಸುವ ಮೂಲಕ ಇತ್ತ ಜನಪರ ನಿಲುವು ಮತ್ತು ರಾಜಕೀಯ ಹೆಜ್ಜೆ ವಿಸ್ತಾರಗೊಳಿಸಿಕೊಳ್ಳಲು ದಾರಿ ಮಾಡಿಕೊಂಡಿz್ದÁರೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.

ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್‌ರು ಸಾಥ್ ನೀಡಿದ್ದು ಹೊರತುಪಡಿಸಿದರೆ ತಮ್ಮ ಪP್ಷÀದ ನಾಯಕ ಕೇಂದ್ರ ಸಚಿವರು ಬಂದರೂ ಜಿಲ್ಲೆಯ ಸ್ವಪP್ಷÀ ಬಿಜೆಪಿಯವರಲ್ಲಿ ಅಷ್ಟೊಂದು ಉತ್ಸಾಹ ಕಾಣಲಿಲ್ಲ.ಇಲ್ಲಿನತಕ ಬಂದಿz್ದÁರೆ, ಜತೆಗೆ ಇರದಿದ್ದರೆ ಹೇಗೆ ಎಂಬ ಕಾರಣಕ್ಕಾಗಿ ಜಿ¯್ಲÁಧ್ಯP್ಷÀರು ಸೇರಿ ಕೆಲವರು ಎಡಬಿಡದೆ ಕಾಣಿಸಿಕೊಂಡರು. ಉಳಿದಂತೆ ಸಚಿವ ಸೋಮಣ್ಣ ಪ್ರವಾಸದಲ್ಲಿ ಹಿರೋ ಪಾತ್ರ ನಿರ್ವಹಿಸಿದ್ದು ಶರಣಗೌಡರೇ ಎಂಬುದು ವಿರೋಧಿಗಳು ಒಪ್ಪಿಕೊಳ್ಳುವ ಮಾತು.

ಕೇಂದ್ರ ಸಚಿವ ಸೋಮಣ್ಣ ಸೆಳೆತಕ್ಕೆ ಶರಣಗೌಡ ಸಿಕ್ಕಿದ್ದು, ಇದು ಅವರ ಮುಂದಿನ ರಾಜಕೀಯ ನಡೆಗೆ ದಿಕ್ಸೂಚಿಯಾಗಬಹುದೆಂಬ ಲೆಕ್ಕಾಚಾರವೂ ರಾಜಕೀಯ ವಿರ್ಮಶಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.