ಕಲಬುರಗಿ: ೭೮ನೇ ಸ್ವಾತಂತ್ರೊÈÃತ್ಸವ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಭಾರತೀಯ ಜನತಾ ಪಕ್ಷದ ನಗರದ ಘಟಕದಿಂದ ಮಂಗಳವಾರ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಬೈಕ್‌ಗಳೊಂದಿಗೆ ತ್ರಿವರ್ಣ ಧ್ವಜಗಳನ್ನು ಹೊತ್ತು, ರಾರಾಜಿಸುತ್ತ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಜೈ ಘೋಷಗಳನ್ನು ಮೊಳಗಿಸಿದರು.
ನಗರದ ಹುಮನಾಬಾದ್ ಬೇಸ್ ಬಳಿಯ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರತಿಮೆ ಬಳಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಸೂಪರ್ ಮಾರ್ಕೆಟ್, ಜಗತ್ ವೃತ್ತ, ಎಸ್‌ವಿಪಿ ವೃತ್ತ, ಜೇವರ್ಗಿ ಕ್ರಾಸ್ ಮಾರ್ಗವಾಗಿ ಪುನಃ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಪಟೇಲ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಸಮಾರೋಪವಾಯಿತು.
ನಗರಾಧ್ಯಕ್ಷ ಚಂದು ಪಾಟೀಲ್, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ್, ಶಿವಯೋಗಿ ನಾಗನಳ್ಳಿ, ಮಹಾದೇವ ಬೆಳಮಗಿ, ಪ್ರಮುಖರಾದ ಧರ್ಮಣ್ಣ ಇಟಗಾ, ವರದಾಶಂಕರ ಶೆಟ್ಟಿ, ಶ್ರೀನಿವಾಸ ದೇಸಾಯಿ, ಮಹೇಶ ಚವ್ಹಾಣ್, ಮಾಜಿ ಮೇಯರ್ ವಿಶಾಲ ದರ್ಗಿ, ಅಪ್ಪು ಕಣಕಿ, ಮಹೇಶ ಪಟ್ಟಣ, ಸವಿತಾ ಪಾಟೀಲ್, ಕವಿತಾ ದೇಗಾಂವ ಇತರರಿದ್ದರು.