ಬಾಗಲಕೋಟೆ ನವನಗರದ ಭಾರತೀಯ ಜನತಾ ಪಾರ್ಟಿ ಜಿ¯್ಲÁ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ರಾಮ ನವಮಿ ಹಾಗೂ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು 
ಜಿಲ್ಲೆ

ಬಿಜೆಪಿಗೆ ಪ್ರೇರಕ ಶಕ್ತಿ

ಬಾಗಲಕೋಟೆ: ಭಾರತೀಯ ಜನತಾ ಪಕ್ಷವು ರಾಷ್ಟಿçÃಯ ತತ್ವಗಳ ಮೇಲೆ ನಿರ್ಮಿಸಲಾದ ಸಂಘಟನೆಯಾಗಿದೆ. ಅದರ ಶಕ್ತಿ ಕಾರ್ಯಕರ್ತರು. ಇದು ಯಾವುದೇ ವ್ಯಕ್ತಿ, ನಾಯಕ, ಜಾತಿ ಮತ್ತು ಧರ್ಮಕ್ಕೆ ಮೀರಿದ್ದು, ಎ¯್ಲÁ ಸಮಸ್ಯೆಗಳಿಗೆ ರಾಷ್ಟಿçÃಯ ವಿಧಾನವೇ ಇದರ ಪ್ರೇರಕ ಶಕ್ತಿಯಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಭಾರತೀಯ ಜನತಾ ಪಾರ್ಟಿ ಜಿ¯್ಲÁ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ರಾಮ ನವಮಿ ಹಾಗೂ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಮಾತಾ ಕಿ ಜೈ ನಿಂದ ಶಕ್ತಿಯನ್ನು ಪಡೆಯುತ್ತೇವೆ. ಇದು ನಮ್ಮ ಕೇಂದ್ರ ವಿಷಯವಾಗಿದೆ. ಭಾರತ ನಮ್ಮ ಭೂಮಿ, ಮಾತಾ ಅಂದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿ. ಇನ್ನು 'ಜೈ' ಜನರ ಆಕಾಂಕ್ಷೆಗಳು, ರಾಷ್ಟçದ ಬಗೆಗಿನ ನಮ್ಮ ಆಳವಾದ ಬದ್ಧತೆಯ ಅಭಿವ್ಯಕ್ತಿಯಾಗಿದೆ. ರಾಷ್ಟçವು ಭೂಮಿ, ಜನರು ಮತ್ತು ಸಂಸ್ಕೃತಿಯ ಒಕ್ಕೂಟದಿಂದ ಹೊರಹೊಮ್ಮುತ್ತದೆ. ನಮಗೆ ಸಾಂಸ್ಕೃತಿಕ ರಾಷ್ಟಿçÃಯತೆಯಲ್ಲಿ ನಂಬಿಕೆ ಇದೆ. ಭಾರತೀಯ ಜನತಾ ಪಕ್ಷ(ಬಿಜೆಪಿ)ತನ್ನ ೪೫ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಶಕ್ತಿ, ಉತ್ಸಾಹ ನಿಜಕ್ಕೂ ಪ್ರೇರಣಾದಾಯಕವಾಗಿದೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ದೀನ ದಯಾಳ ಉಪಾಧ್ಯಾಯ, ಶ್ಯಾಮ ಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪಾಯಿ, ಲಾಲï ಕೃಷ್ಣ ಅಡ್ವಾಣಿ ಅಂತಹ ಆದರ್ಶ ಪುರುಷರು ಕಟ್ಟಿದ ಪಕ್ಷವೇ ಬಿಜೆಪಿ, ಆ ಎಲ್ಲ ಮಹನೀಯರ ಕನಸುಗಳನ್ನು ಇಂದು ನರೇಂದ್ರ ಮೋದಿಯವರ ನನಸು ಮಾಡುತ್ತಿz್ದÁರೆ ಎಂದು ತಿಳಿಸಿದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಕಳೆದ ಹಲವು ದಶಕಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸಲು ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲ ಕಾರ್ಯಕರ್ತರನ್ನು ನಾವು ಸ್ಮರಿಸಿಕೊಳ್ಳೋಣ. ಈ ಮಹತ್ವದ ದಿನವು ಭಾರತದ ಪ್ರಗತಿಯ ಕಡೆಗೆ ಕೆಲಸ ಮಾಡಲು ಮತ್ತು ವಿಕಸಿತ್ ಭಾರತದ ಕನಸನ್ನು ನನಸಾಗಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಗ್ರಾಮ, ನಗರ, ಜಿ¯್ಲÉ ಮತ್ತು ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿz್ದÁರೆ. ಅವರಂತೆ ನಮ್ಮ ಕ್ಷೇತ್ರಗಳಲ್ಲಿ ನಮ್ಮ ವಯಕ್ತಿಕ ಸ್ವಾರ್ಥವನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು. ಬಿಜೆಪಿ ಹಿರಿಯ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಬಿಜೆಪಿ ಜಿ¯್ಲÁಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಪಕ್ಷ ಬೆಳೆದು ಬಂದ ದಾರಿ ಹಾಗೂ ಮುಂದಿನ ಸಂಘತ್ಮಾಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಎನ್. ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮುಗನೂರಮಠ, ಗುಂಡುರಾವ ಶಿಂಧೆ, ಉಪಾಧ್ಯಕ್ಷೆ ಭಾಗೀರಥಿ ಪಾಟೀಲ, ಜ್ಯೋತಿ ಭಜಂತ್ರಿ, ಸರಸ್ವತಿ ಕುರಬರ, ಭುವನೇಶ್ವರಿ ಕುಪ್ಪಸ್ತ, ಜಯಶ್ರೀ ಏಕಬೋಟೆ, ಯಲ್ಲಪ್ಪ ಬೆಂಡಿಗೇರ, ರಾಜು ಮುದೇನೂರ, ಈರಪ್ಪ ಶಿರಗನ್ನವರ, ಚೆನ್ನಯ್ಯ ಹಿರೇಮಠ, ಸುರೇಶ ಕೋಣ್ಣೂರ ಇತರರು ಇದ್ದರು.