ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕೊರಮ ಸಮಾಜದ ಹಿತಾಭಿವೃದ್ದಿ ಸಂಘದ ಮುಖಂಡ, ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಸುರೇಶ ನಾಗರೇಶಿ, ಮಹಾಂತೇಶ ಭಜಂತ್ರಿ, ಬಿ.ಎಚ್.ಭಜಂತ್ರಿ, ಯಲ್ಲಪ್ಪ ಭಜಂತ್ರಿ ಇತರರು ಉಪಸ್ಥಿತರಿದ್ದರು.  
ಜಿಲ್ಲೆ

ಬಿಜೆಪಿ ಸೋಲಿಸುವುದು ನಮ್ಮ ಗುರಿ

ಬಾಗಲಕೋಟೆ: ನ್ಯಾ. ಎ.ಜೆ.ಸದಾಶಿವ ಆಯೋಗ ವರದಿ ಆಧಾರಿಸಿ ಒಳ ಮೀಸಲಾತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಬಿಜೆಪಿ ಸರ್ಕಾರ ೧೦೧ ಜಾತಿಗಳÀಲ್ಲಿ ಒಡಕು ಸೃಷ್ಟಿಸುವ ಮೂಲಕ ಅನ್ಯಾಯ ಮಾಡಿದ್ದು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಜಿಲ್ಲಾ ಕೊರಮ ಸಮಾಜದ ಹಿತಾಭಿವೃದ್ದಿ ಸಂಘದ ಮುಖಂಡ, ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ ಹೇಳಿದರು.

ಒಳ ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿಲ್ಲ. ಸದಾಶಿವ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೧೦೧ ಜಾತಿಗಳನ್ನು ಒಟ್ಟಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಸದಾಶಿವ ಆಯೋಗವು ಸರ್ಕಾರವನ್ನು ತಪ್ಪುದಾರಿಗೆಳೆದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಸಮಾನತೆಯನ್ನು ಽಕ್ಕರಿಸುವ ರೀತಿಯಲ್ಲಿ ವರದಿಯನ್ನು ಏಕಪಕ್ಷಿವಾಗಿ ಜಾರಿಗೊಳಿಸಲಾಗಿದ್ದು ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ವರದಿಯು ಈಡೀ ಕೊರಮ ಸಮುದಾಯವನ್ನು ಬೀದಿಗೆ ತಂದು ನಿಲ್ಲಿಸುವ ಹುನ್ನಾರವು ನಡೆದಿದ್ದು, ಇಡೀ ರಾಜ್ಯದ ಕೊರಮ ಸಮಾಜವು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕೃರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸರ್ಕಾರವು ಎರಡು ಸಮಾಜದವರನ್ನು ತೃಪ್ತಿಪಡಿಸುವ ಉದ್ದೇಶದಿಂದ ೯೯ ಉಪ ಜಾತಿಗಳಿಗೆ ಅನ್ಯಾಯ ಎಸಗಿದೆ. ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಕೊರಮ, ಕೊರಚ, ಭೋವಿ, ಬಂಜಾರ ಸಮುದಾಯಗಳು ಬೃಹತ್ ಪ್ರತಿಭಟನೆ ನಡೆಸಿದಾಗ ಸರ್ಕಾರವು ಯಾವುದೇ ಕಾರಣಕ್ಕೂ ವರದಿಯನ್ನು ಎಲ್ಲ ಸಮುದಾಯ ದೊಂದಿಗೆ ಚರ್ಚಿಸದೇ ಜಾರಿಗೊಳಿಸುವುದಿಲ್ಲ ಎಂಬ ಭರವಸೆ ನೀಡಿತ್ತು. ಆದರೆ ಚುನಾವಣೆ ಹಿನ್ನೆಲೆ ತರಾತುರಿಯಲ್ಲಿ ಮನಸಿಗೆ ಬಂದಂತೆ ಒಳ ಮೀಸಲಾತಿಯನ್ನು ಜಾರಿ ಗೊಳಿಸಿ ವಚನ ಭ್ರಷ್ಟರಾಗಿದ್ದಾರೆಂ ಎದು ಆರೋಪಿಸಿದರು.

ಕೊರಮ, ಕೊರಚ ಸಮಾಜವು ಇಂದಿನವರೆಗೂ ಅಸ್ಪÈಶ್ಯರಾಗಿಯೇ ಉಳಿದಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಯಾವುದೇ ಬೆಳವಣಿಗೆ ಕಂಡಿಲ್ಲ. ರಾಜ್ಯದಲ್ಲಿ ಅಂದಾಜು ೪೫ ಲಕ್ಷ ರಷ್ಟು ಸಮಾಜದವರು ಇದ್ದಾರೆ. ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಮತಗಳಿವೆ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿ ಅಂತ ಸಮಾಜದ ಬಾಂಧವರಿಗೆ ಜಾಗೃತಿ ಮೂಡಿಸಲಾಗುವದು ಎಂದು ಹೇಳಿದರು.

ಮುಖಂಡರಾದ ಸುರೇಶ ನಾಗರೇಶಿ, ಮಹಾಂತೇಶ ಭಜಂತ್ರಿ, ಬಿ.ಎಚ್.ಭಜಂತ್ರಿ, ಯಲ್ಲಪ್ಪ ಭಜಂತ್ರಿ ಇತರರು ಉಪಸ್ಥಿತರಿದ್ದರು.