ಬೈಲಹೊಂಗಲ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮ ಮೆಚ್ಚಿ ಅನೇಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷ ಸೇರ್ಪಡೆಗೆ ಎಲ್ಲರಿಗೂ ಸದಾ ಸ್ವಾಗತವಿದೆ ಎಂದು ಕಾಡಾ ಅಧ್ಯ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಸ್ಥಳಿಯ ಗೃಹ ಕಚೇರಿಯಲ್ಲಿ ಹಿರೇಕೊಪ್ಪ, ಮರಕುಂಬಿ, ಚಿಕ್ಕೊಪ್ಪ, ಮೂಗಬಸವ, ಬೈಲವಾಡ ಗ್ರಾಮದ ಅನ್ಯ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಗುರುವಾರ ಬರಮಾಡಿಕೊಂಡು ಮಾತನಾಡಿದ ಅವರು, ಬಿಜೆಪಿಯ ಆಡಳಿತಕ್ಕೆ ಜನತೆ ಸಂತುಷ್ಟರಾಗಿದ್ದಾರೆ. ದೇಶ ಹಾಗೂ ರಾಜ್ಯ ಅಭಿವೃದ್ದಿ ಪತದಲ್ಲಿ ಸಾಗುತ್ತಿದೆ.
ಮುಂಬರುವ ಚುನಾವಣೆಗಳಲ್ಲಿ ಪವನ್ನು ಬಹುಮತದಿಂದ ಗೆಲ್ಲಿಸುವ ಹೊಣೆ ಕಾರ್ಯಕರ್ತರ ಮೇಲಿದೆ. ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕು. ಮತೇತ್ರದ ತುಂಬ ಯುವಕರು ಪಕ್ಕೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ದೇಶ ಹಾಗೂ ರಾಜ್ಯ ಅಭಿವೃದ್ದಿಯಲ್ಲಿ ಸಾಗುತ್ತಿವೆ. ಇಡೀ ದೇಶವೇ ಬಿಜೆಪಿಮಯವಾಗುವ ಕಾಲ ಸನೀಹಿತವಾಗಿದೆ ಎಂದರು.
ಮಂಡಲ ಅಧ್ಯ ಮಡಿವಾಳಪ್ಪ ಚಳಕೊಪ್ಪ ಮಾತನಾಡಿ, ಕಾಡಾ ಅಧ್ಯ ಡಾ.ವಿಶ್ವನಾಥ ಪಾಟೀಲ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಇವರ ಸಮಾಜಸೇವೆ ಮೆಚ್ಚಿ ಯುವ ಸಮುದಾಯ ಮತೇತ್ರದಾದ್ಯಂತ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಯುವ ಮುಖಂಡ ಅಮಿತ ವಿಶ್ವನಾಥ ಪಾಟೀಲ, ಅಶೋಕ ಗುಂಡ್ಲೂರ, ವಿಜಯ ಪತ್ತಾರ, ಬಸವರಾಜ ಮುರಕೀಭಾವಿ, ಚಂದನ ಕೌಜಲಗಿ, ಬಿ.ಎಂ.ಪಾಟೀಲ ಇತರರು ಇದ್ದರು.