ದೇವಲಗಾಣಗಾಪುರ: ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಪೂರ್ಣ ಯಶಸ್ವಿಯಾಗಿ ನಡೆದಿದ್ದು, 50 ಲP್ಷÀದ ಗಡಿ ದಾಟಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಹೇಳಿದರು. ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲೂ ಕಾರ್ಯಕರ್ತರು ಉತ್ಸಾಹದಿಂದ ಅಭಿಯಾನ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಅಫಜಲಪುರ ಮಂಡಲ ಅಧ್ಯP್ಷÀ ವಿದ್ಯಾಸಾಗರ ಮಂಗಳೂರೆ, ರಾಘು ಜಿ.ಮಠಪತಿ, ಸತೀಶ ಜಮಾದಾರ, ಸುಭಾಷ ರಾಠೋಡ್, ಜ್ಯೋತಿ ಪಾಟೀಲ್, ಎಸ್.ಎಸ್. ಅತ್ತಾರ್ ಇತರರಿದ್ದರು.