ಜಿಲ್ಲೆ

ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಯಡಿಯೂರಪ್ಪ ನೇಮಕದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ: ನಮೋ ವೇದಿಕೆ ಸಂಭ್ರಮಾಚರಣೆ

ಸೊರಬ: ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ನೇಮಕಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿ, ವಿರೋಧಿಗಳಿಗೆ ನಡುಕ ಹುಟ್ಟಿಸಿದೆ ಎಂದು ನಮೋ ವೇದಿಕೆ ಸೊರಬ ಮಂಡಲದ ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.

ನಮೋ ವೇದಿಕೆ ಸೊರಬ ಮಂಡಲದ ವತಿಯಿಂದ ಗುರುವಾರ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಿಹಿ ಹಂಚಿ ಮಾತನಾಡಿ, ನಮ್ಮೆಲ್ಲರ ರಾಜಕೀಯದ ದೊಡ್ಡ ಶಕ್ತಿಯಾದ ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿ ಮತ್ತು ರಾಜ್ಯ ಹಾಗೂ ಕೇಂದ್ರದ ಚುನಾವಣೆ ಸಮಿತಿಗೆ ನೇಮಕ ಮಾಡಿರುವುದರಿಂದ ನಮೋ ವೇದಿಕೆಯ ಸದಸ್ಯರಿಗೆ ಹೆಚ್ಚಿನ ಚೈತನ್ಯ ಬಂದತ್ತಾಗಿದೆ. ಬಿಎಸ್‌ವೈ ಅವರನ್ನು ನೇಮಕ ಮಾಡುವ ಮೂಲಕ ವಿರೋಧಿಗಳಿಗೆ ಕೇಂದ್ರದ ನಾಯಕರು ತಕ್ಕ ಉತ್ತರ ನೀಡಿದ್ದಾರೆ ಎಂದರು.