ಮೈಸೂರು: ನಗರದ ಬಿಜೆಪಿ ಯುವಮೋರ್ಚಾ ಚಾಮರಾಜ ಕ್ಷೇತ್ರದ ವಾರ್ಡ್ ಸಂಖ್ಯೆ 1ರ ಲಕ್ಷ್ಮೀಕಾಂತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ಯುವ ಮೋರ್ಚಾ ಅಧ್ಯಕ್ಷರಾಗಿ ಮನು ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್‌ಕುಮಾರ್, ಆದರ್ಶ ಕಾಮತ್ ಅವರಿಗೆ ಶಾಸಕ ಎಲ್.ನಾಗೇಂದ್ರ ನೇಮಕಾತಿ ಪತ್ರ ನೀಡಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅವರು ಯುವಕರಿಗೆ ಹಲವು ಕೌಶಲಾಭಿವೃದ್ಧಿ, ನಿರುದ್ಯೋಗ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಸುಮಾರು 1000 ಕೋಟಿಗಿಂತಲೂ ಹೆಚ್ಚಿನ ಅನುದಾನ ನೀಡಿದ್ದು, ಹೆಚ್ಚಿನ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.
ನಗರ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ಗೌಡ ಮಾತನಾಡಿ, ಒಂದನೇ ವಾರ್ಡ್‌ಗೆ ಸುಮಾರು 4 ಕೋಟಿ ರೂ.ಗಿಂತಲೂ ಹೆಚ್ಚಿನ ಅನುದಾನ ನೀಡುವ ಮೂಲಕ ಶಾಸಕ ಎಲ್.ನಾಗೇಂದ್ರ ಅವರು ಅಭಿವೃದ್ಧಿ ಮಾಡಿದ್ದಾರೆ. ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿವಿಧ ನಿಗಮ ಮಂಡಳಿಗಳಿಂದ ಸುಮಾರು 200ಕ್ಕೂ ಹೆಚ್ಚು ಜನರಿಗೆ ಹಣಕಾಸು ನೆರವು ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಲವರು ಬಿಜೆಪಿ ಯುವ ಮೋರ್ಚಾ ಸೇರ್ಪಡೆಗೊಂಡರು. ಚಾಮರಾಜ ಯುವ ಮೋರ್ಚಾ ಅಧ್ಯಕ್ಷ ಸಚಿನ್‌ಗೌಡ, ವಾರ್ಡ್‌ನ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಂದ್ರ, ಅರುಣ್ ಕಾಟ್ಕರ್, ಬೂತ್ ಅಧ್ಯಕ್ಷರಾದ ಶಾಂತಪ್ಪ, ಶಿವಸ್ವಾಮಿ, ಸೌಮ್ಯಾ, ಗುರುಗೌಡ, ಭಾಸ್ಕರ, ಹೇಮಂತ, ಹರೀಶ್‌ಕುಮಾರ್, ಸಂತೋಷ್ ಕುಮಾರ್, ಮದನ್, ರವಿ, ಮಹೇಶ್‌ಕುಮಾರ್, ಬಿಎಲ್ಎ ದಿನೇಶ್‌ಕುಮಾರ್ ಹಲವರು ಇದ್ದರು.