ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಸೇರಿದಂತೆ ಇತರರು ಇದ್ದರು.  
ಜಿಲ್ಲೆ

ಬಿಜೆಪಿ ಮಾನ ಮರ್ಯಾದೆ ಕಳೆದುಕೊಂಡಿದೆ

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಮಾನ ಮರ್ಯಾದೆ ಕಳೆದುಕೊಂಡಿದೆ. ಶೇ.೪೦ ಕಮಿಷನ್, ಸ್ಟ್ರ‍್ಯಾಂಟ್ರೋ ರವಿ ಪ್ರಕರಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಬೇಸರ ವ್ಯಕ್ತವಾಗುತ್ತದೆ. ಅಷ್ಟೊಂದು ವ್ಯವಸ್ಥೆ ಹದಗೆಟ್ಟು ಹೋಗಿದೆ ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಸಿಗುತ್ತದೆ ಎಂದರೇ ಗಲೀಜಿನಲ್ಲಿ ಕೈ ಹಾಕುತ್ತಾರೆ ಬಿಜೆಪಿಯವರು. ಸಿದ್ದರಾಮಯ್ಯ ಅವರಿಗೆ ಅಪ್ಪ, ಅಮ್ಮ ಹೆಸರು ಇಟ್ಟಿದ್ದಾರೆ. ಹೆಸರು ಬದಲಾಯಿಸಲು ಇರ‍್ಯಾರು ಎಂದು ಪ್ರಶ್ನಿಸಿದರು.
ನಾನು ಮಂಗಳೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಉಸ್ತುವಾರಿವಾಗಿದ್ದೇನೆ. ಅನೇಕ ಯುವಕರ ತೆಲೆಯಲ್ಲಿ ಧರ್ಮ ತುಂಬಿ ದಾರಿ ತಪ್ಪಿಸಲಾಗುತ್ತಿದೆ. ಜೈಲನಲ್ಲಿ ಆ ಹುಡಗರ ಸ್ಥಿತಿ ನೋಡಿದರೇ ಭಯವಾಗುತ್ತದೆ. ಯಾರು ಬಿಜೆಪಿಯರನ್ನು ಅಽಕಾರಕ್ಕೆ ತಂದರು ಅವರೇ ಇದೀಗ ಆಕ್ರೋಶಿತಗೊಂಡಿದ್ದಾರೆ. ಬಿಜೆಪಿಯವರು ಅಭಿವೃದ್ಧಿ, ಜನಪರ ಕಾರ್ಯಕ್ರಮ ಕೊಡಲು ಅಧಿಕಾರಕ್ಕೆ ಬಂದಿಲ್ಲ. ವ್ಯವಹಾರ ಮಾಡಲು ಬಂದಿದ್ದಾರೆ. ಅವರ ಬಳಿ ಸುಳ್ಳು ಹೇಳುವುದಕ್ಕೂ ಏನು ಉಳಿದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಸೇರಿದಂತೆ ಇತರರು ಇದ್ದರು.