ಚಿತ್ರದುರ್ಗ:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಲೋಕಸಭೆ,ವಿಧಾನಸಭೆಗಳಲ್ಲಿ ಶೇ.33ಮೀಸಲು ಜಾರಿಗೊಳಿಸುವ ಮಸೂದೆ ಮಂಡಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಚಿತ್ರದುರ್ಗನಗರ ಬಿಜೆಪಿ ಮಹಿಳಾ ಮೋರ್ಚಾ ಕಾರ‌್ಯಕರ್ತೆಯರು ಗುರುವಾರ ನಗರದ ಹೊಳ ಲ್ಕೆರೆ ರಸ್ತೆಯಲ್ಲಿ ಸಿಹಿ ವಿತರಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ,ಉಪಾಧ್ಯಕ್ಷ ಸಂಪತ್‌ಕುಮಾರ್,ರಾಜ್ಯಬಿಜೆಪಿ ಎಸ್‌ಸಿ ಮೋ ರ್ಚಾ ಕಾರ‌್ಯಕಾರಣಿ ಸದಸ್ಯೆ ಭಾರ್ಗವಿದ್ರಾವಿಡ,ನಗರಸಭೆ ಸದಸ್ಯೆಭಾಗ್ಯಮ್ಮ,ನಗರ ಮಹಿಳಾ ಮೋರ್ಚಾ ಗ್ರಾಮಾಂತರ ಅಧ್ಯಕ್ಷೆ ವೀಣಾ, ರಾಜೇಶ್ವರಿ,ಅರುಣಾ,ಶ್ರೀದೇವಿ,ಸರಸ್ವತಿ,ಚಂದ್ರಕಲಾ,ಶ್ರೀಕಾಂತಮ್ಮ,ಉಮಾದೇವಿ,ಚಂದ್ರಮ್ಮ,ರಾಣಿ,ಸುಧಾ,ಕಿರಣ್,ಎನ್.ಕೆ.ಪ್ರಸಾದ್ ಬಾಬು ಮತ್ತಿತರರು ಇದ್ದರು.