ಕೂಡುಮಂಗಳೂರು ಗ್ರಾಪಂ ಅಧ್ಯಕ್ಷರಾಗಿ ಭಾಸ್ಕರ್‌ನಾಯಕ್ ಮತ್ತು ಉಪಾಧ್ಯಕ್ಷೆಯಾಗಿ ಶಶಿಕಲಾ ಆಯ್ಕೆಯಾದರು. ಮೂಡ್ಲಿಗೌಡ ಚಂದ್ರು, ಬಿ.ಬಿ.ಭಾರತೀಶ್, ಗಣಿಪ್ರಸಾದ್, ಡೈಮಂಎಡ್ ಮಣಿ, ಪ್ರಶಾಂತ್ ಇದ್ದರು.  
ಜಿಲ್ಲೆ

ಬಿಜೆಪಿ ಬೆಂಬಲಿತರಿಗೆ ವಿಜಯಮಾಲೆ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಭಾಸ್ಕರ್‌ನಾಯಕ್, ಉಪಾಧ್ಯಕ್ಷೆಯಾಗಿ ಶಶಿಕಲಾ ಚುನಾಯಿತರಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾಸ್ಕರ್ ನಾಯಕ್‌ಗೆ 18 ಮತ ಮತ್ತು ಕೆ.ಬಿ.ಶಂಶುದ್ದಿನ್‌ಗೆ 6 ಮತ ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿಕಲಾ ಅವರಿಗೆ 13, ಆಶಾ ಅವರಿಗೆ 11 ಮತ ಲಭಿಸಿತು.

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡುಮಂಗಳೂರು ಗ್ರಾಪಂ ಪಿಡಿಒ ಸಂತೋಷ್ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.ಸದಸ್ಯರಾದ ಕೆ.ಕೆ.ಭೋಗಪ್ಪ, ಶಿವಮ್ಮ, ಶಶಿಕಲಾ, ದೀಪಾ, ಈರಯ್ಯ, ಗಿರೀಶ್, ಜ್ಯೋತಿ, ಹರೀಶ್, ಚೈತ್ರಾ, ಮಂಜು, ಭಾಗ್ಯಾ, ಖತೀಜ, ಪಾರ್ವತಮ್ಮ, ದಿನೇಶ್, ಗೌರಮ್ಮ, ಇಂದಿರಾ, ಫಿಲೋಮಿನಾ, ಚಂದ್ರಶೇಖರ್, ಲಕ್ಷ್ಮೀ, ಮಣಿಕಂಠ ಇದ್ದರು.