ಸೋಮವಾರಪೇಟೆ: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಆಡಳಿತ ಚುಕ್ಕಾಣಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಾಲ್ವರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. 13 ನಿರ್ದೇಶಕರು ಆಯ್ಕೆಯಾಗಿದ್ದು, ಈ ಬಾರಿ 9 ಹೊಸ ಮುಖಗಳಿಗೆ ಮತದಾರರ ಆಶೀರ್ವಾದ ಸಿಕ್ಕಿದೆ. ಬಸವನಕೊಪ್ಪ ಗ್ರಾಮದ ಬಿ.ಪಿ.ಮೊಗಪ್ಪ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಹಿರಿಕರ ಗ್ರಾಮದ ಕೆ.ಕೆ.ಶಿವಪ್ರಕಾಶ್, ಹೆಗ್ಗುಳ ಗ್ರಾಮದ ಜಿ.ಎಂ.ಹೂವಯ್ಯ, ಅಜ್ಜಳ್ಳಿ ಗ್ರಾಮದ ಎ.ಎಸ್.ನವೀನ್ ಕುಮಾರ್, ಶುಂಠಿ ಗ್ರಾಮದ ಎಸ್.ಬಿ.ಭರತ್ ಕುಮಾರ್, ಗೌಡಳ್ಳಿ ಗ್ರಾಮದ ಜಿ.ಎಸ್.ನಾಗರಾಜು, ಹೊನ್ನವಳ್ಳಿ ಗ್ರಾಮದ ಎಚ್.ಎಸ್.ನೇತ್ರಾವತಿ, ಶುಂಠಿ ಗ್ರಾಮದ ಎಸ್.ಸಿ.ಸುನೀತಾ, ಹಾರಳ್ಳಿ-ಬೀಟಿಕಟ್ಟೆ ಗ್ರಾಮದ ಕೆ.ಜಿ.ದಿನೇಶ್, ಹಣಕೋಡು ಗ್ರಾಮದ ಎಚ್.ಆರ್.ಸುರೇಶ್, ಗೆಜ್ಜೆಹಣಕೋಡು ಗ್ರಾಮದ ಜಿ.ಬಿ.ಗಿರೀಶ್, ಜಿ.ಈ.ಸುರೇಶ್, ಶುಂಠಿ ಗ್ರಾಮದ ಕೆ.ಎಲ್.ರಕ್ಷಿತ್ ಆಯ್ಕೆಯಾಗಿದ್ದಾರೆ.