ಬಾಗಲಕೋಟೆ ನಗರದ ಪ್ರೇಸ್‌ಕ್ಲಬ್‌ನಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಬಸವರಾಜ ಬದಾಮಿ, ನಾಗರಾಜ್ ಹದ್ಲಿ, ರಕ್ಷಿತಾ ಈಟಿ, ಸಿಕಂದರ್ ಅಥಣಿ ಉಪಸ್ಥಿತರಿದ್ದರು. 
ಜಿಲ್ಲೆ

ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ

ಬಾಗಲಕೋಟೆ: ಬಿಜೆಪಿ ಪಕ್ಷದಲ್ಲಿ ಯಾವುದೇ ಅಽಕಾರ, ಸ್ಥಾನಮಾನ ಕೇಳಿರಲಿಲ್ಲ. ನನ್ನ ಹಾಗೂ ಬೆಂಬಲಿಗರ ಗೌರವಕ್ಕೆ ಧಕ್ಕೆಯಾಯಿತು. ಈ ಬಗ್ಗೆ ಪಕ್ಷದ ಹಿರಿಯ ಗಮನಕ್ಕೆ ತಂದರು ಕ್ಯಾರೇ ಎನ್ನಲಿಲ್ಲ. ಇಂತಹ ವ್ಯವಸ್ಥೆಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜನತಾ ಪರಿವಾರದಲ್ಲಿ ಇದ್ದೆ, ನಗರಸಭೆ, ಬಿಟಿಡಿಎ ಅಧ್ಯಕ್ಷನಾಗಿ ಜನ ಪರ ಕೆಲಸ ಮಾಡಿದ್ದೇನೆ. ಸದಾ ಜನರೊಂದಿಗೆ ಇರಲು ಬಯಸುತ್ತೇನೆ. ಆದರೇ ಬಿಜೆಪಿ ಪಕ್ಷದಲ್ಲಿ ಸರ್ವಾಽಕಾರ ಧೋರಣೆ ಇದೆ. ಒಪ್ಪಲು ಸಾಧ್ಯವಿಲ್ಲ. ಐದು ವರ್ಷದಿಂದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನೋವಿನಿಂದ ಹೊರ ಬಂದಿದ್ದೇನೆ ಎಂದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭಷ್ಟಾಚಾರ ನಡೆದಿದೆ. ಪ್ರತಿ ಹಂತದಲ್ಲಿ ಲಂಚ ನಡೆಯುತ್ತಿದ್ದು, ಸಂತ್ರಸ್ತರಿಗೆ ಬಹಳಷ್ಟು ಕಷ್ಟವಾಗಿದೆ. ಬಾಗಲಕೋಟೆ ಜನಕ್ಕೆ ನೆಮ್ಮದಿಯ ಬದುಕು ಬೇಕಿದೆ. ಈ ಸಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಕೇಳಿಲ್ಲ. ಸರಿಯಾಗಿ ನಡೆಸಿಕೊಳ್ಳಿ ಅಂತ ಹೇಳಿದ್ದೇನೆ. ಅದಕ್ಕೆ ಸಿದ್ದರಾಮಯ್ಯ, ಡಿಕೆಶಿಯಾಗಿ ಎಲ್ಲರು ಭರವಸೆ ನೀಡಿದ್ದಾರೆ ಎಂದರು.

೨೦೧೮ ರಲ್ಲಿ ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಸೇರಿದಂತೆ ನನ್ನ ಹಿತೈಷಿಗಳು ಬಿಜೆಪಿ ಸೇರ್ಪಡೆ ಮಾಡಿದರು. ಬಾಗಲಕೋಟೆಯಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸಿದೆ. ಆದರೇ ಬಾಗಲಕೋಟೆ ಬಿಜೆಪಿ ಪಕ್ಷದಲ್ಲಿ ಮುಖಂಡರು, ಪದಾಽಕಾರಿಗಳು, ಕಾರ್ಯಕರ್ತರಿಗೆ ಯಾವುದೇ ಗೌರವ ಸಿಗುತ್ತಿಲ್ಲ. ಸೌಜನ್ಯಕ್ಕೂ ಮಾತನಾಡುವುದಿಲ್ಲ. ೨೦೦೪ ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೆ ಆಗಲೂ ಇದೇ ರೀತಿ ಆಗಿತ್ತು. ಸದ್ಯ ಪಕ್ಷದಲ್ಲಿ ಉಸಿರು ಗಟ್ಟುವ ವಾತಾವರಣದಲ್ಲಿ ಇರಲು ಸಾಧ್ಯವಾಗಲಿಲ್ಲ. ಯೂಸ್ ಆ್ಯಂಡ್ ಥ್ರೋ ಸಂಸ್ಕೃತಿ ತಕ್ಕ ಪಾಠ ಕಲಿಸಬೇಕಿದೆ. ಕಾರ್ಯಕರ್ತರಿಗೂ ಇದು ನೋವು ಉಂಟು ಮಾಡಿದೆ ಎಂದು ಹೇಳಿದರು.

ಬಿಜೆಪಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿರುವ ವಿ.ಪ ಸದಸ್ಯ ಪಿ.ಎಚ್.ಪೂಜಾರ ಅವರಿಗೆ ಇದೇ ರೀತಿ ಆಗಿದೆ. ಬಿಜೆಪಿ ಸಭೆಗಳಲ್ಲಿ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅದಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಪಕ್ಷದ ಜೊತೆಗೆ ವ್ಯಕ್ತಿಯು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಬಸವೇಶ್ವರ ಬ್ಯಾಂಕ್ ಪ್ರಕಾಶ ತಪಶೆಟ್ಟಿ ಅವರು ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಲಬಂದಂತಾಗಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಮಾತನಾಡಿ, ಕಳೆದ ಸಾರಿ ನನ್ನಿಂದ ಲೋಪಗಳು ಆಗಿದ್ದು ನಿಜ. ನೋವುಗಳು ನನಗೂ ಆಗಿವೆ. ಇನ್ನೂ ಮುಂದೆ ಇಂತಹ ಘಟನೆಗಳು ಆಗಲಾರದಂತೆ ನೋಡಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಾಶ ತಪಶೆಟ್ಟಿ ಅವರಿಗೆ ಭರವಸೆ ನೀಡಿದರು.


ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಮುಖಂಡರಾದ ಬಸವರಾಜ ಬದಾಮಿ, ನಾಗರಾಜ್ ಹದ್ಲಿ, ರಕ್ಷಿತಾ ಈಟಿ, ಸಿಕಂದರ್ ಅಥಣಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.