ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ೭೫ನೇ ಜನ್ಮದಿನೋತ್ಸವದ ಪ್ರಯುಕ್ತ ಬುಧವಾರ ಬಿಜೆಪಿ ನಗರ ಮಂಡಲದಿAದ ಹಿರೇಮಗಳೂರಿನ ಶ್ರೀ ಕೋದಂಡರಾಮಚAದ್ರ ಸ್ವಾಮಿ ದೇವಾಲಯದಲ್ಲಿ ಮುಂಜಾನೆ ಕಾರ್ಯಕರ್ತರು ದೇಗುಲ ಸ್ವಚ್ಛಗೊಳಿಸಿ, ಸಸಿನೆಟ್ಟು ಹಾಗೂ ನಗರದ ಗಣಪತಿ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿ ಜನ್ಮದಿನ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ರಾಷ್ಟçದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಆರೋಗ್ಯ, ರಕ್ತದಾನ ಶಿಬಿರ ಸೇರಿದಂತೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇಂದು ಮುಂಜಾನೆಯೇ ದೇವಾಲಯ ಹೊರಾಂಗಣ, ಒಳಾಂಗಣವನ್ನು ಕಾರ್ಯಕರ್ತರು ಸ್ವಚ್ಚಗೊಳಿಸಿ, ಸಸಿನೆಡಲಾಗಿದೆ. ರಾಷ್ಟçದ ಪ್ರಧಾನಿಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಅವರ ಕಾರ್ಯತಂತ್ರಗಳು ಅನೇಕ ದೇಶಗಳಲ್ಲಿ ಪಾಲನೆ ಮಾಡುತ್ತಿರುವುದು ಭಾರತೀಯರು ಹೆಮ್ಮೆಪಡುವ ವಿಚಾರವಾಗಿದೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ, ಗುಜರಾತ್ ರಾಜ್ಯದಲ್ಲಿ ೧೩ ವರ್ಷ ಮುಖ್ಯಮಂತ್ರಿ ಹಾಗೂ ೧೧ ವರ್ಷ ದೇಶದ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿರುವ ನರೇಂದ್ರ ಮೋದಿ ಅವರು ಇಂದಿಗೂ ಕಳಂಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಪ್ರಾಮಾಣಿಕವಾಗಿ ಜನಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ದೇಹ ಶುದ್ಧತೆ ಜೊತೆಗೆ ದೇಶ ಶುದ್ಧತೆ ಎಂಬ ಉz್ದೆÃಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಆಧ್ಯತೆ ನೀಡಿದ್ದಾರೆ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ಶ್ಲಾಘನೀಯ. ಅಲ್ಲದೇ ದೇಶದ ಸ್ವಚ್ಛತೆ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಮನಸ್ಸು, ದೇಹವನ್ನು ಮುಡುಪಾಗಿಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಖಜಾಂಚಿ ನಾರಾಯಣಗೌಡ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಾಧ್ಯಕ್ಷೆ ಪವಿತ್ರ ಮಧುಗುಂಡಿ, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಮುಖಂಡರಾದ ಎಚ್.ಕೆ.ಕೇಶವ ಮೂರ್ತಿ, ರೇವನಾಥ್, ಕೆ.ಪಿ.ಮಧು, ಪ್ರದೀಪ್, ಗಗನ, ಯಶೋಧ ಮತ್ತಿತರರಿದ್ದರು.