ಸುಂಟಿಕೊಪ್ಪ: 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಸದಸ್ಯ ಮುಸ್ತಾಫ ಅವರನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಕೊಡಗು ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಗುರುವಾರ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಅಭಿವೃದ್ಧಿ ಪರ ಚರ್ಚೆ ನಡೆಸದೆ ವಿನಾಕಾರಣ ಅಧ್ಯಕ್ಷ ರಮೇಶ ಅವರನ್ನು ನಿಂದಿಸಿದ ಸದಸ್ಯ ಮುಸ್ತಾಫ, ಕುರ್ಚಿ ಎತ್ತಿ ಹಲ್ಲೆ ನಡೆಸಿರುವ ಕುರಿತು ದೂರು ನೀಡಿದರೂ ಬಂಧಿಸಿ ಕ್ರಮಕೈಗೊಳ್ಳಲಿಲ್ಲ. ಬದಲಾಗಿ ಮುಸ್ತಾಫಾ ದೂರು ಸ್ವೀಕರಿಸಿ ಮೊದಲ ದೂರುದಾರರ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಾರೆ. ಸುಳ್ಳು ದೂರು ನೀಡಿದ್ದನ್ನು ವಾಪಸ್ ಪಡೆಯಬೇಕು. ಈ ಪಂಚಾಯಿತಿಯಲ್ಲಿ ಹಿಂದಿನ 2 ಪಿಡಿಒಗಳನ್ನು, ಈಗಿನ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ಹೆದರಿಸಿ ಆಡಳಿತ ನಡೆಸಲು ಅಡಿಪಡಿಸುತ್ತಿದ್ದಾರೆ. ಮುಸ್ತಾಫಾ ಅವರನ್ನು ಕೂಡಲೇ ಬಂಧಿಸದದ್ದಲ್ಲಿ 1 ವಾರ ಕಳೆದು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ ದೂರವಾಣಿಯಲ್ಲಿ ಪ್ರತಿಭಟನಾರರೊಂದಿಗೆ ಮಾತನಾಡಿ, ತನಿಖೆ ನಡೆಸಿ ದೂರುದಾರರು ನೀಡಿರುವ ವಿಡಿಯೋ ತುಣುಕನ್ನು ಪರಿಶೀಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸುಂಟಿಕೊಪ್ಪ ಹೋಬಳಿ ಬಿಜೆಪಿ ಅಧ್ಯಕ್ಷ ದಾಸಂಡ ರಮೇಶ್, ಗ್ರಾ.ಪಂ.ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಸಿ.ಜೆ.ಜೋಸೆಫ್, ಹರದೂರು ಪದ್ಮನಾಭ, ನಾಕೂರು ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ಮಂದೋಡಿ ಜಗನ್ನಾಥ್, ಕೆದಕಲ್ ಗ್ರಾ.ಪಂ. ಉಪಾಧ್ಯಕ್ಷ ಸಂಜು ಪೊನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ನಾಕೂರು ಶಿರಂಗಾಲ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್, ಸಹ ಪ್ರಮುಖ್ ರಂಜೀತ್ ಪೂಜಾರಿ, ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಮೋಹನ್, ಸೋಮವಾಪೇಟೆ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಕಾರ್ಯದರ್ಶಿ ಗೌತಮ್, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಯ್ಯ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್, ಸುಂಟಿಕೊಪ್ಪ ಒಬಿಸಿ ಅಧ್ಯಕ್ಷ ಸಿ.ಸಿ.ಸುನಿಲ್ ಕುಮಾರ್ ಇತರರು ಇದ್ದರು.
ಸುಂಟಿಕೊಪ್ಪ ಪೊಲೀಸ್ ಠಾಣೆ ಉಪನಿರೀಕ್ಷಕ ಮಂಜು ಮನವಿ ಸ್ವೀಕರಿಸಿದರು.