filter: 0; fileterIntensity: 0.000000; filterMask: 0; captureOrientation: 0; shaking: 0.000000; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 265.0;aec_lux_index: 0;albedo: ;confidence: ;motionLevel: 0;weatherinfo: null;temperature: 32;zeissColor: bright; 
ಜಿಲ್ಲೆ

ಬಿಜೆಪಿ-ಕಾಂಗ್ರೆಸ್ ಅಪವಿತ್ರ ಮೈತ್ರಿ: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಸಮಾಧಾನ

ಹಾಸನ: ನಗರಸಭೆ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಅಪವಿತ್ರ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಮಗೆ ಸೋಲುಂಟಾಗಿದೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಬಿಜೆಪಿ ಪಕ್ಷದ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಚಂದ್ರೇಗೌಡರ ಮೇಲೆ ಯಾವುದೇ ವೈಯಕ್ತಿಕ ದ್ವೇಷದಿಂದ ಕೆಳಗಿಳಿಸಲು ಮುಂದಾಗಲಿಲ್ಲ. ಈ ಹಿಂದಿನ ಒಡಂಬಡಿಕೆಯಿಂದ ರಾಜೀನಾಮೆ ನೀಡಲು ಚಂದ್ರೇಗೌಡರಿಗೆ ತಿಳಿಸಿದ್ದೆವು. ಆದರೆ ಅವರು ಅಧಿಕಾರದ ಆಸೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನತ್ತ ಹೋಗಿದ್ದಾರೆ. ನಾವು ಹಿಂದುಳಿದ ಸಮುದಾಯದವರಿಗೂ ಅಧಿಕಾರ ನೀಡುವ ಉದ್ದೇಶ ಹೊಂದಿದ್ದೇವು. ಆದರೆ ಇದನ್ನು ಧಿಕ್ಕರಿಸಿ ಚಂದ್ರೇಗೌಡರು ಹೋಗಿದ್ದಾರೆ ಎಂದು ದೂರಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಚಂದ್ರೇಗೌಡರ ಮೇಲೆ ನನಗಾಗಲೀ ಅಥವಾ ನಮ್ಮ ಸದಸ್ಯರಿಗಾಗಲಿ ಹಾಗೂ ಪಕ್ಷದ ವರಿಷ್ಠರಿಗಾಗಲಿ ವೈಯಕ್ತಿಕ ದ್ವೇಷ ಇರಲಿಲ್ಲ. ನಾವೇ ಅವರನ್ನು ಸದಸ್ಯರನ್ನಾಗಿ ಮತ್ತು ಅಧ್ಯಕ್ಷರನ್ನಾಗಿ ಮಾಡಿದೆವು. ಅಧಿಕಾರದ ಆಸೆಗಾಗಿ ಪಕ್ಷದ್ರೋಹ ಮಾಡಿದ್ದಾರೆ. ಒಡಂಬಡಿಕೆಯಂತೆ ಮೊದಲ ಅವಧಿಗೆ ಚಂದ್ರೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನಾವೇ. ಆದರೆ ಅಧಿಕಾರದ ಆಸೆಯಿಂದ ಇಂದು ನಮಗೆ ಮೋಸ ಮಾಡಿ ಹೋಗಿದ್ದಾರೆ ಎಂದು ಕಿಡಿಕಾರಿದರು.