ಜಿಲ್ಲೆ

ಬಿಜೆಪಿ ಕಚೇರಿಯಲ್ಲಿ ಮದಕರಿನಾಯಕ ಜಯಂತಿ

ಚಿತ್ರದುರ್ಗ: ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ರಾಜವೀರ ಮದಕರಿನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕರ್ತರು, ಮುಖಂಡರು ಜಯಂತಿ ಆಚರಿಸಿದರು.

ಆರ್‌ಎಸ್‌ಎಸ್‌ನ ಸಾಮರಸ್ಯ ಸಂಘಟಕ ವಾದಿರಾಜ್, ಪಕ್ಷದ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ಬಾಳೇಕಾಯಿ ರಾಮ್‌ದಾಸ್, ಮುಖಂಡರಾದ ಪಾಪೇಶ್ ನಾಯಕ, ಕೆ.ಟಿ.ಕುಮಾರಸ್ವಾಮಿ, ಕವನಾ, ಮಂಜುನಾಥ್, ಕಲ್ಲೇಶಯ್ಯ, ಸೋಮು, ಸೂರಮ್ಮನಹಳ್ಳಿ ನಾಗರಾಜ್, ಬೋಸೆರಂಗಸ್ವಾಮಿ, ಶಿವಪ್ರಸಾದ್, ಪಾರ್ವತಯ್ಯ, ಚಿತ್ರನಾಯಕ ಸಂಘದ ಅಧ್ಯಕ್ಷ ಪ್ರಶಾಂತ್ ಕೂಲಿಕಾರ್ ಇತರರಿದ್ದರು.