ಜಿಲ್ಲೆ

ಬಿಜೆಪಿ ಅಧ್ಯಕ್ಷನಾಗಲು ನಾನು ರೆಡಿ

ಯಾದಗಿರಿ: ಬಿಜೆಪಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸಲು ನಾನು ರೆಡಿ ಇದ್ದೇನೆ ಎಂದು ಮಾಜಿ ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಮ್ಮಲ್ಲಿ ಸಾಕಷ್ಟು ಜನ ನಾಯಕರು ಅರ್ಹತೆ ಹೊಂದಿದ್ದಾರೆ. ಅದರಂತೆ ನಾನೂ ಸಹ ಈ ಜವಾಬ್ದಾರಿ ನಿಭಾಯಿಸಲು ಸಮರ್ಥನಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀಮರ್ಾನಕ್ಕೆ ಬದ್ಧ ಎಂದು ನಾಯಕ, ಲೋಕಸಭೆ ಚುನಾವಣೆಗೆ ರಾಯಚೂರು ಕ್ಷೇತ್ರದಿಂದ ನಾನು ಪಕ್ಷದ ಅಭ್ಯಥರ್ಿಯಾಗಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜುಗೌಡ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ ಸೇರೋದಿಲ್ಲ. ನಮ್ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ. ಹಿಂಗಾಗಿ ಕಾಂಗ್ರೆಸ್ ನಾಯಕರ ಮನೆಗೆ ಹೋಗಿದ್ದಾರೆ ಅಷ್ಟೆ ಎಂದು ನಗೆ ಚಟಾಕಿ ಹಾರಿಸಿದರು. ಮಾಜಿ ಸಚಿವ ಶಿವರಾಮ್ ಹೆಬ್ಬಾರ ಸೇರಿ ಇತರರು ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸಹ ಮಾಧ್ಯಮಗಳಲ್ಲೇ ನೋಡಿದ್ದೇನೆ. ನಾವು ಚಚರ್ೆ ಮಾಡಿದಾಗ ಕೆಲವರಿ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ಕೆಲವರಿಗೆ ಸ್ವಲ್ಪ ಅಸಮಾಧಾನವಿದೆ. ನೆಗಡಿ ಆಗಿದೆ ಎಂಬ ಮಾತ್ರಕ್ಕೆ ಮೂಗು ಕತ್ತರಿಸಿಕೊಳ್ಳುವುದು ತಪ್ಪಾಗುತ್ತದೆ. ಅಲ್ಲದೆ ಇನ್ನೂ ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಲೇಟಾಗಿ ಮಾಡಿದರೂ ಲೆಟೆಸ್ಟ್ ಆಗಿ ಮಾಡಲಿದೆ ಎಂದು ಹೇಳಿದರು.