ಚಿತ್ರದುರ್ಗ: ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ನಡೆಲಾಗುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮಹಿಳೆಯೊಬ್ಬರು ದೂರು ನೀಡಿದ್ದು, ಇದಕ್ಕೂ ಮೊದಲು ಅನೇಕರ ವಿರುದ್ಧ ದೂರು ನೀಡಿದ್ದರೆಂದು ಈ ಹಿಂದೆ ಗೃಹ ಸಚಿವರೇ ಹೇಳಿದ್ದಾರೆ. ಇದರ ಹಿಂದೆ ಯಾರದೋ ಪಿತೂರಿ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಸರ್ಕಾರ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ, ಹಿಂದಿರುವವರ ಪತ್ತೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ನವೀನ್ ಚಾಲುಕ್ಯ, ಕಾಲುವೇಹಳ್ಳಿ ಪಾಲಯ್ಯ, ನಾಗರಾಜ್ ಬೇದ್ರೆ, ಕಿರಣ್, ಯಶವಂತ್ ಇತರರಿದ್ದರು.