ಜಿಲ್ಲೆ

ಬಿಇಡಿಯಲ್ಲಿ ಎಸ್‌ಆರ್‌ಎಸ್‌ಗೆ ರ‌್ಯಾಂಕ್ ಗರಿ

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಇಲ್ಲಿನ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಮೂವರು ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ.

ಎನ್.ಪಿ. ಭಾಗ್ಯಶ್ರೀ(ಶೇ.89.2)ಮೊದಲನೇ, ನಾಜೀಯಾ ತಸ್ನೀಮಾ(ಶೇ.87.8) ಎಂಟನೇ ಹಾಗೂ ಆರ್. ಅಂಬಿಕಾ(ಶೇ.87.5)10ನೇ ರ‌್ಯಾಂಕ್ ಪಡೆದಿದ್ದಾರೆ. ಸಂಸ್ಥೆ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತ ಪಡಿಸಿದ್ದಾರೆ.