ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬಿಇಡಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ 20 ದಿನದಲ್ಲಿ ಫಲಿತಾಂಶ ಪ್ರಕಟಿಸಲು ವಿವಿ ಪರೀಕ್ಷಾಂಗ ವಿಭಾಗ ನಿರ್ಧರಿಸಿದೆ.
ವಿವಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 26 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಈ ಪೈಕಿ ಬೀದರ್ 8, ಕಲಬುರಗಿ 13, ಯಾದಗಿರಿ 2 ಮತ್ತು ರಾಯಚೂರಿನಲ್ಲಿ 3 ಕೇಂದ್ರಗಳಿವೆ. 2ನೇ ಸೆಮಿಸ್ಟರ್ಗೆ 4560 ಮತ್ತು 4ನೇ ಸೆಮಿಸ್ಟರ್ಗೆ 4995 ಸೇರಿ 9555 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕುಲಸಚಿವ (ಮೌಲ್ಯಮಾಪನ) ಡಾ.ಸಂಜೀವಕುಮಾರ ತಿಳಿಸಿದ್ದಾರೆ.
ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮ್ಯಾಥ್ಸ್ ಮತ್ತು ಬಯಲಾಜಿಕಲ್ ಸೈನ್ಸ್ ಒಳಗೊಂಡ ಮೆಥಡ್-1 ಪರೀಕ್ಷೆ ಶನಿವಾರ ನಡೆಯಲಿದ್ದು, ಈ ಪರೀಕ್ಷೆ ಬರೆಯುವ ವಿದ್ಯಾಥರ್ಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಯಾವುದೇ ಸಮಸ್ಯೆ ಆಗಲ್ಲ. ಶುಕ್ರವಾರ ಜರುಗಿದ ಬಿಇಡಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಕೆಲ ತಾಂತ್ರಿಕ ತೊಂದರೆಯಿಂದಾಗಿ ಶನಿವಾರ ನಡೆಯಬೇಕಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆ ವಿತರಣೆಯಾಗಿತ್ತು. ಆರಂಭದಲ್ಲೇ ಗೊತ್ತಾಗಿ ವಾಪಸ್ ಪಡೆಯಲಾಗಿದೆ. ಶನಿವಾರ ಎಂದಿನಂತೆ ಪರೀಕ್ಷೆಗೆ ಒಂದು ಗಂಟೆ ಮೊದಲು ಪ್ರಶ್ನೆ ಪತ್ರಿಕೆಯನ್ನು ಆಯಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ನಾತಕೋತ್ತರ ಪದವಿ ಪರೀಕ್ಷೆ ಪೂರ್ಣಗೊಂಡಿದ್ದು, ಮೌಲ್ಯಮಾಪನ ಪ್ರಕ್ರಿಯೆ ಶುರುವಾಗಿದೆ. ಈ ಪೈಕಿ ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಸಂಖ್ಯಾಶಾಸ್ತ್ರ ಸೇರಿ ಕೆಲ ವಿಷಯಗಳ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದದ್ದು 20 ದಿನಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ಪಿಜಿ ಇನ್ ಯೋಗ ಫಲಿತಾಂಶ ಪ್ರಕಟವಾಗುವಲ್ಲಿ ವಿಳಂಬವಾಗಿದೆ. ಮಾಚರ್್ 20ರೊಳಗೆ ಬಾಕಿ ಉಳಿದ ಕೋಸರ್್ಗಳ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.