ಜಿಲ್ಲೆ

ಬಿಆರ್​ಟಿಎಸ್ ಬಸ್ ಸಂಚಾರ ಇಂದಿನಿಂದ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆಯಡಿ (ಬಿಆರ್​ಟಿಎಸ್) ಹವಾನಿಯಂತ್ರಿತ ಬಸ್ ಚಿಗರಿ ಸಂಚಾರವನ್ನು ಜೂನ್ 5ರಿಂದ ಪುನರಾರಂಭ ಮಾಡಲಾಗುತ್ತಿದೆ.

ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸದ್ಯಕ್ಕೆ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ಹುಬ್ಬಳ್ಳಿ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಧಾರವಾಡದ ಬಿಆರ್​ಟಿಎಸ್ ನಿಲ್ದಾಣದವರೆಗೆ ಮಾತ್ರ ಬಸ್ ಕಾರ್ಯಾಚರಣೆ ನಡೆಸಲಾಗುವುದು.

ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಾಟ ಹೆಚ್ಚಿಸಲಾಗುವುದು. ಮಾರ್ಚ್ 21ರ ನಂತರ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಪಡೆದಿದ್ದ ಪ್ರಯಾಣಿಕರು ಮುಂದಿನ ಮಾನ್ಯತಾ ಅವಧಿಗೆ ಪಿಒಎಸ್ ಕೌಂಟರ್​ಗಳಲ್ಲಿ ಕ್ಯೂಆರ್, ಮಾಸಿಕ ಪಾಸ್ ಟಿಕೆಟ್​ಗಳನ್ನು ಸ್ಮಾರ್ಟ್ ಕಾರ್ಡ್ ತೋರಿಸಿ ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕರು ಕರೊನಾ ಹರಡುವುದನ್ನು ತಪ್ಪಿಸಲು ಹಾಗೂ ಸಮಯ ಉಳಿಸಲು ಇ-ಪರ್ಸ್ ಸ್ಮಾರ್ಟ್ ಕಾರ್ಡ್ ಪಡೆಯಲು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಕೋರಿದ್ದಾರೆ.