ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಹುಂಡಿ ಹಣವನ್ನು ಬುಧವಾರ ಎಣಿಕೆ ಮಾಡಲಾಯಿತು.
ನಾಣ್ಯಗಳ ರೂಪದಲ್ಲಿ 49,520 ರೂ., ನೋಟುಗಳ ರೂಪದಲ್ಲಿ 9,25,302 ರೂ. ಸೇರಿದಂತೆ ಒಟ್ಟು 9,74,822 ರೂ. ಸಂಗ್ರಹವಾಗಿದೆ. ಫೆ.6ರಂದು ಹುಂಡಿ ಹಣ ಎಣಿಕೆ ಮಾಡಲಾಯಿತು. ಇದರೊಂದಿಗೆ 10 ಯುರೋ ಒಂದು ನೋಟು ಹುಂಡಿಯಲ್ಲಿ ಸಿಕ್ಕಿದೆ. ಇದರೊಂದಿಗೆ ಚಿನ್ನದ ತಾಳಿಬೊಟ್ಟು ಹುಂಡಿಯಲ್ಲಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಪ್ರಧಾನ ಅರ್ಚಕ ರವಿಕುಮಾರ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ವೀರಭದ್ರಸ್ವಾಮಿ, ಪಾರುಪತ್ತೇದಾರ ರಾಜು, ಶೇಷಾದ್ರಿ ಹಾಗೂ ದೇಗುಲದ ಸಿಬ್ಬಂದಿ ಹಾಜರಿದ್ದರು.