ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ 1 ಅವಿರೋಧ, 11 ಅಭ್ಯರ್ಥಿಗಳು ಚುನಾಯಿತರಾದರು.
ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ 20 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 11 ನಿರ್ದೇಶಕರು ಚುನಾಯಿತರಾದರು. ಸಾಮಾನ್ಯ ಕ್ಷೇತ್ರದಿಂದ ಕೆ.ಎಸ್.ರಾಜೇಂದ್ರ ಪ್ರಸಾದ್, ಬಿ.ಪಿ.ಕರುಣಾ ಮೂರ್ತಿ, ಬಿ.ಎಸ್.ಮಹೇಶ್, ಕೆ.ಎಸ್. ಆನಂದ ಕುಮಾರ್, ಕೆ.ಎಂ.ರೇಚಣ್ಣ, ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಎಂ.ಮನು, ಮಹಿಳಾ ಮೀಸಲು ಭಾಗ್ಯಶ್ರೀ, ಭಾಗ್ಯಾ, ಪರಿಶಿಷ್ಟ ಜಾತಿ ಮೀಸಲು ಎಚ್.ಎಂ.ಮಹೇಶ್, ಹಿಂದುಳಿದ ವರ್ಗ ಎ ಬಿ.ಕೆ.ಮಹೇಶ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಎಂ.ಪರಶಿವಮೂರ್ತಿ ಚುನಾಯಿತರಾದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸವಿತಾ ಅವಿರೋಧ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷ ಬಿ.ಆರ್.ಸಿದ್ದರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ದೊರೆ, ಮುಖಂಡರಾದ ನಂಜುಂಡಸ್ವಾಮಿ, ಕೆ.ಎಂ.ನಾಗಮಾದಯ್ಯ, ದ್ಯಾವಪಟ್ಟಣ ಉಮೇಶ್, ಕಿರಣ್, ಕುಮಾರ್, ಸಿಇಒ ನಂಜುಂಡಸ್ವಾಮಿ ವಿಜೇತರನ್ನು ಅಭಿನಂದಿಸಿದರು.