ಜಿಲ್ಲೆ

ಬಿ.ಜಿ.ಪಾಟೀಲ್​ ಜನ್ಮದಿನದ ನಿಮಿತ್ತ ದಾನ

ಕಲಬುರಗಿ: ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್ ಜನ್ಮದಿನ ನಿಮಿತ್ತ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲರ ಗೆಳೆಯರ ಬಳಗದಿಂದ ಕಾಳಗಿ ತಾಲೂಕು ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳಿಗೆ ಮಂಗಳವಾರ ನೋಟ್‌ಬುಕ್ಸ್, ಪೆನ್ನು ವಿತರಿಸಲಾಯಿತು. ಅಣ್ಣಾರಾವ ಪೆದ್ದಿ, ಗುಂಡಪ್ಪ ವಜೀರಗಾಂವ್, ಸಿದ್ದು ಪೆದ್ದಿ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಇತರರಿದ್ದರು.