ಜಿಲ್ಲೆ

ಬಿ.ಚೌಡಪ್ಪ ಉಜ್ಜಿನಿ ಗ್ರಾಪಂ ಅಧ್ಯಕ್ಷ

ಉಜ್ಜಿನಿ: ಸ್ಥಳೀಯ ಗ್ರಾಪಂ ಅಧ್ಯಕ್ಷರಾಗಿ ಬಿ.ಚೌಡಪ್ಪ ಅವಿರೋಧವಾಗಿ ಸೋಮವಾರ ಆಯ್ಕೆಯಾದರು. ಗ್ರಾಪಂ ಸಂಭಾಗಣದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 22 ಸದಸ್ಯರ ಪೈಕಿ 19 ಜನ ಪಾಲ್ಗೊಂಡಿದ್ದರು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಅಮರೇಶ ಕಾರ್ಯನಿರ್ವಹಿಸಿದರು.

ಉಪಾಧ್ಯಕ್ಷೆ ಪುಷ್ಪಾವತಿ ರೇವಣ್ಣ, ಪಿಡಿಒ ಸಿ.ಉಮಾಪತಿ, ಸದಸ್ಯರಾದ ವೈ.ರವಿ, ನಾಗೇಂದ್ರಪ್ಪ, ಕೆ. ಪರಸಪ್ಪ, ಗೌರಮ್ಮ, ಶಿವಗಂಗಮ್ಮ, ರುದ್ರಮ್ಮ, ಬಸಮ್ಮ, ಶಕಿಲಾಬೀ, ರೇಖಾ, ಮರಿಯಪ್ಪ, ಭಾಗ್ಯಮ್ಮ, ಮಳ್ಳಕ್ಕ, ರತ್ನಮ್ಮ, ವಿ.ಲೋಕೇಶ್,ಮಳ್ಳಪ್ಪ,ಪರಸಪ್ಪ, ಮುಪ್ಪಿನಪ್ಪ, ಬಿ.ಲೋಕೇಶ್, ಮಂಜುನಾಥ ಸ್ವಾಮಿ ಇದ್ದರು.