ಬಾಗಲಕೋಟೆ: ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪುರ ಕಲಾ ಮತ್ತು ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಆಗಸ್ಟ್-ಸೆಪ್ಟೆಂಬರ್ ೨೦೨೪ ರಲ್ಲಿ ನಡೆಸಿದ ಬಿ.ಎ ೬ನೇ ಸೆಮೆಸ್ಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ೮೩ ವಿದ್ಯಾರ್ಥಿಗಳ ಪೈಕಿ ೭೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಫಲಿತಾಂಶ ಶೇ.೯೭.೫೯ ರಷ್ಟಾಗಿದೆ. ಐದು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಸಹಿತ ೪೪ ವಿದ್ಯಾರ್ಥಿಗಳು ಡಿಸ್ಟಿಂಕ್‌ಶನ್‌ದಲ್ಲಿ ಹಾಗೂ ೧೫ ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿದ್ದಾರೆ.
ಪೃಥ್ವಿರಾಜ ಕುಂಬಾರ ಶೇ.೯೧.೦೮ ಪ್ರಥಮ, ಸಿದ್ದಪ್ಪ ಮುದ್ದಾಪುರ ಶೇ.೮೯.೮೫ ದ್ವಿತೀಯ ಹಾಗೂ ಶಾರುಖ್‌ಖಾನ್ ಜಲಗೇರಿ ಶೇ. ೮೯.೬೯ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಗೌರವ ಕಾರ್ಯದರ್ಶಿ ಡಾ. ಗಿರೀಶ ಮಸೂರಕರ, ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.