ಕಲಬುರಗಿ: ೨೦೨೪--&-೨೫ನೇ ಸಾಲಿನ ಬಿ.ಇಡಿ ಅಂತಿಮ ರ‍್ಷದ ನಾಲ್ಕನೇ ಸೆಮಿಸ್ಟರ್ ಲಿತಾಂಶ ಪ್ರಕಟಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಜೂ.೧೩ರಂದು ಗುಲ್ರ‍್ಗ ವಿವಿ ಕರ‍್ಯಸೌಧ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗುಲ್ರ‍್ಗ ವಿವಿ ಬಿ.ಇಡಿ. ವಿದ್ಯರ‍್ಥಿಗಳ ಹೋರಾಟ ಸಮಿತಿ ಸಂಚಾಲಕ ತೇಜಸ್ ಇಬ್ರಾಹಿಂಪುರ ಹೇಳಿದರು. ಗುಲ್ರ‍್ಗ ವಿಶ್ವವಿದ್ಯಾಲಯದ ಅಡಿ ಜಿಲ್ಲೆಯಲ್ಲಿ ಸಾವಿರಾರು ವಿದ್ಯರ‍್ಥಿಗಳು ಬಿ.ಇಡಿ ಅಧ್ಯಯನ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯ ವಿದ್ಯರ‍್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಬಿ.ಇಡಿ ೪ನೇ ಸೆಮಿಸ್ಟರ್ ಮುಗಿದು ಏಳು ತಿಂಗಳಾದರೂ ಇದುವರೆಗೆ ಲಿತಾಂಶ ಬಂದಿಲ್ಲ. ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆ ತೆಗೆದುಕೊಂಡರೂ ೪೫ ದಿನದ ಒಳಗೆ ಲಿತಾಂಶ ಪ್ರಕಟಿಸಬೇಕು ಎಂದು ನಿಯಮವಿದೆ. ಆದರೆ, ಗುಲ್ರ‍್ಗ ವಿಶ್ವವಿದ್ಯಾಲಯ ನಿಯಮ ಗಾಳಿಗೆ ತೂರಿದೆ. ಬಿ.ಇಡಿ ಮುಗಿಸಿ ಶಿಕ್ಷಕರಾಗಲು ಬಯಸುವ ಆಕಾಂಕ್ಷಿಗಳಿಗೆ ಸಮಸ್ಯೆ ಆಗುತ್ತಿದೆ. ಲಿತಾಂಶ ಪ್ರಕಟಿಸಬೇಕು. ಮೊದಲನೇ ಸೆಮ್ನಿಂದ ಇದುವರೆಗೂ ಮೂಲ ಅಂಕಪಟ್ಟಿ ನೀಡಬೇಕು ಎಂದು ಆಗ್ರಹಿಸಿದರು. ಪ್ರಭಾಕರ್ ಚಿಂಚೋಳಿ, ದತ್ತು ಹುರಡಕರ್, ರಮೇಶ ದೇವರಕರ್ ಇತರರಿದ್ದರು.